ಬೆಳ್ಳಾರೆ ಕಾಮಧೇನು ಟವರ್ಸ್ ನಲ್ಲಿರುವ ಕಾಮಧೇನು ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 23 ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದ್ದು ಸಂಘದಲ್ಲಿ ಗಣಹೋಮವು ನ.18 ರಂದು ನಡೆಯಿತು.

ಈ ಸಂದರ್ಭದಲ್ಲಿ ಸಂಘದ ಸ್ಥಾಪಕಾಧ್ಯಕ್ಷ ಎಂ.ಮಾಧವ ಗೌಡ,ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು,ಉಪಾಧ್ಯಕ್ಷ ಮಹಾಬಲ ಗೌಡ ಕಲ್ಲೋಣಿ ಮತ್ತು ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.















ಸಂಘದಲ್ಲಿ ವೆಹಿಕಲ್ ಲೋನ್ ,ಚಿನ್ನಾಭರಣ ಸಾಲ,ಭೂ ಅಡಮಾನ ಸಾಲ ಹಾಗೂ ಇನ್ನಿತರ ಸಾಲ ಸೌಲಭ್ಯಗಳು ಲಭ್ಯವಿದೆ. ಠೇವಣಿಗಳ ಮೇಲೆ ಆಕರ್ಷಕ ಬಡ್ಡಿ ನೀಡಲಾಗುವುದು.
ಗ್ರಾಹಕರಿಗೆ ಅನುಕೂಲವಾಗುವಂತೆ ತ್ವರಿತಗತಿಯಲ್ಲಿ ಲೋನ್ ನೀಡಲಾಗುವುದು ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.










