ಅಡ್ಯಡ್ಕದಲ್ಲಿ ಸಾಗುವಾನಿ ‌ಮರದ ದಿಮ್ಮಿ ವಶ ಪಡಿಸಿಕೊಂಡ ಅರಣ್ಯ‌ ಇಲಾಖೆ

0

ತೊಡಿಕಾನ ಗ್ರಾಮದ ಅಡ್ಯಡ್ಕದಲ್ಲಿ ಸಾಗುವಾನಿ ಮರದ ದಿಮ್ಮಿ ಸಾಗಿಸುತ್ತಿದ್ದಾರೆಂಬ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಒಂದು ದಿಮ್ಮಿಯನ್ನು ವಶ ಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

ಘಟನೆಯನ್ನು ದೃಢಪಡಿಸಿರುವ ಸುಳ್ಯ ರೇಂಜರ್ ಮಂಜುನಾಥ್ ರವರು ಒಂದು ಸಾಗುವಾನಿ ಮರದ ದಿಮ್ಮಿ ವಶ ಪಡಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.