ಮೈ ಭಾರತ್ ಕೊಡಗು ಜಿಲ್ಲೆ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಭಾರತ ಸರಕಾರ, ಅಗ್ನಿಯುವ ಕ್ಲಬ್ ದೆರಾಜೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಡಿಕೇರಿ ಸಂಯುಕ್ತಾಶ್ರಯದಲ್ಲಿ ನ.11ರಂದು ತಾಲೂಕು ಮಟ್ಟ ಕ್ರೀಡಾ ಕೂಟ ನಡೆಸಲಾಯಿತು.















ಈ ಕ್ರೀಡಾಕೂಟವನ್ನು ನಿವೃತ್ತಿ ASI ಹಾಗೂ ಸ್ಟೇಟ್ ಲೆವೆಲ್ ಕಬಡ್ಡಿ ಪ್ಲೇಯರ್ ಜಿ.ಸಿ. ಕೃಷ್ಣ ಉದ್ಘಾಟಿಸಿದರು. ಈ ವೇಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀಮತಿ ಜಾಜ ಬೀಬ ಅವರನ್ನು ಸನ್ಮಾನಿಸಲಾಯಿತು. ನಂತರ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ವೆಂಕಟೇಶ ಪ್ರಸನ್ನ ಪಿ.ಕೆ ವಹಿಸಿಕೊಂಡರು.
ವೇದಿಕೆಯಲ್ಲಿ IQAC ಸಂಚಾಲಕರಾದ ಡಾ.ಅನುಪಮ ಸಭಾಪತಿ ಹಾಗೂ ಕ್ರೀಡಾ ಸಂಚಲಕರಾದ ಶ್ರೀ ಸುಧಾಕರ ಟಿ.ಎಂ ಮುಂತಾದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮ ಮುಗಿದ ನಂತರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಂಗಣದಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸಲಾಯಿತು.










