ಡಿ.30: ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ 28 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧಾರ- ಸಮಿತಿ ರಚನೆ

0

ಅಧ್ಯಕ್ಷ – ರಾಧಾಕೃಷ್ಣ ಬೊಳ್ಳೂರು, ಕಾರ್ಯಾಧ್ಯಕ್ಷ – ಕೃಷ್ಣ ಪ್ರಸಾದ್ ಮಾಡಬಾಕಿಲು, ಪ್ರ. ಕಾರ್ಯದರ್ಶಿ – ತೇಜಸ್ವಿ ಕಡಪಳ, ಖಜಾಂಜಿ – ಅರುಣ್ ಕುಮಾರ್ ಮುಂಡಾಜೆ

ಅಮರಮೂಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಘ-ಸಂಸ್ಥೆಗಳ, ಸಾಹಿತ್ಯಾಭಿಮಾನಿಗಳ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಮಾಲೋಚನಾ ಸಭೆಯು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ನ.18ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲುರವರು ವಹಿಸಿದ್ದರು.

ಈ ಬಾರಿಯ 28 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇದರ ವಠಾರ ದಲ್ಲಿ ನಡೆಸುವುದಾಗಿ ಎಲ್ಲರ ಸರ್ವಾನುಮತದ ಒಪ್ಪಿಗೆಯಂತೆ ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. 2025 ರ ಡಿಸೆಂಬರ್ 30 ರಂದು ಸಮ್ಮೇಳನದ ದಿನ ನಿಗದಿಪಡಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಚೊಕ್ಕಾಡಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ರಾಧಾಕೃಷ್ಣ ಬೊಳ್ಳೂರು,ಅಮರಮೂಡ್ನೂರು ಪಂಚಾಯತ್ ಸದಸ್ಯರಾದ ಕೃಷ್ಣಪ್ರಸಾದ ಮಾಡಬಾಕಿಲು, ದಿವ್ಯ ಮಡಪ್ಪಾಡಿ, ಕ.ಸಾ.ಪ ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಚಂದ್ರಮತಿ.ಕೆ, ಗೌರವ ಕೋಶಾಧಿಕಾರಿ ದಯಾನಂದ ಆಳ್ವ,ಜಿಲ್ಲಾ ಸಾಹಿತ್ಯ ಪರಿಷತ್ತಿನ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ, ಹಿರಿಯರಾದ ಆನೆಕಾರ ಗಣಪಯ್ಯ, ಚೊಕ್ಕಾಡಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದಸಂಕೀರ್ಣ.ಎ. ಎಲ್ ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ರಚನೆ:

ಸ್ವಾಗತಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕಿ ಕು.ಭಾಗೀರಥಿ ಮುರುಳ್ಯ, ಅಧ್ಯಕ್ಷರಾಗಿ ರಾಧಾಕೃಷ್ಣ ಬೊಳ್ಳೂರು,ಕಾರ್ಯಾಧ್ಯಕ್ಷರಾಗಿ ಕೃಷ್ಣಪ್ರಸಾದ್ ಮಾಡಬಾಕಿಲು,
ಉಪಾಧ್ಯಕ್ಷರಾಗಿ ಅಣ್ಣಾಜಿ ಗೌಡ ಪೈಲೂರು, ಪ್ರಧಾನ ಕಾರ್ಯದರ್ಶಿ ತೇಜಸ್ವಿ ಕಡಪಳ, ಜತೆ ಕಾರ್ಯದರ್ಶಿ ಸಂಕೀರ್ಣ.ಎ.ಎಲ್, ಶ್ರೀಮತಿ ಚೈತನ್ಯ.ಕೆ.ಎನ್,
ಕೋಶಾಧಿಕಾರಿಅರುಣಕುಮಾರ್ ಮುಂಡಾಜೆ ಹಾಗೂ ಗೌರವ ಸಲಹೆಗಾರರಾಗಿ ಮಾಜಿ ಸಚಿವ ಎಸ್. ಅಂಗಾರ, ಆನೆಕಾರ ಗಣಪಯ್ಯ, ಎಂ‌.ಟಿ‌.ಶಾಂತಿಮೂಲೆ, ಲಕ್ಷ್ಮೀಶ ಚೊಕ್ಕಾಡಿ, ಜಯಪ್ರಕಾಶ್ ರೈ ಚೊಕ್ಕಾಡಿ, ಎ.ಕೆ.ಹಿಮಕರ ಸದಸ್ಯರುಗಳಾಗಿ ಜಯಶಿವಮಡಪ್ಪಾಡಿ, ವೆಂಕಟ್ರಮಣಇಟ್ಟಿಗುಂಡಿ, ತಿರುಮಲೇಶ್ವರ ದಂಬೆತೋಟ, ಯಾದವೇಂದ್ರ ಕಡಪಳ, ಹೇಮಾವತಿ ತಂಟೆಪ್ಪಾಡಿ, ಸುಲೋಚನ.ಎಂ, ರೂಪವಾಣಿ.ಬಿ, ಶ್ಯಾಮಲಆನೆಕಾರ್, ಜನಾರ್ಧನ ಪೈಲೂರು, ಪ್ರವೀಣಕುಮಾರ ಮಡಪ್ಪಾಡಿ ಯವರನ್ನು ಆಯ್ಕೆ ಮಾಡಲಾಯಿತು.

ಮುಂದಿನ ಪೂರ್ವ ಭಾವಿ ಸಭೆಯಲ್ಲಿ ಉಪ ಸಮಿತಿ ರಚಿಸುವುದೆಂದು ತೀರ್ಮಾನಿಸಲಾಯಿತು. ತೇಜಸ್ವಿ ಕಡಪಳ ಸ್ವಾಗತಿಸಿ, ಸಂಕೀರ್ಣ ಎ. ಎಲ್ ವಂದಿಸಿದರು.