ಸುಳ್ಯ ಪೊಲೀಸ್ ಠಾಣೆಯ ಬಳಿ ಫುಟ್ಬಾತಿನಲ್ಲಿ ಕಾಡುಬಳ್ಳಿಗಳ ರಾಶಿ

0

ಸಾರ್ವಜನಿಕರಿಗೆ ನಡೆದಾಡಲು ಆತಂಕ

ಸುಳ್ಯದ ಮುಖ್ಯಬೀದಿಯಾದ ಪೊಲೀಸ್ ಠಾಣೆ ಸಮೀಪ ಸಾರ್ವಜನಿಕರು ನಡೆದಾಡಲು ಉಪಯೋಗಿಸುವ ಫುಟ್ಬಾತಿನ ಬಳಿ ಕಾಡುಬಳ್ಳಿ ಆವರಿಸಿ ನಡೆದಾಡಲು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾರ್ವಜನಿಕರು ನಡೆದಾಡಲು ಇದೇ ರಸ್ತೆಯನ್ನು ಉಪಯೋಗಿಸುತ್ತಿದ್ದು ಇದೀಗ ಕಾಡುಬಳ್ಳಿ ತುಂಬಿ ವಿಷ ಜಂತುಗಳು ಇರಬಹುದೆಂಬ ಆತಂಕ ಉಂಟು ಮಾಡಿದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತು ಪರಿಸರ ಸ್ವಚ್ಛತೆಯನ್ನು ಕಾಪಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.