














ಕಾಸರಗೋಡು ಸರಕಾರಿ ಪ್ರೌಢಶಾಲೆಯಲ್ಲಿ ಜರಗಿದ ಕಾಸರಗೋಡು ಉಪ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಹೈಸ್ಕೂಲ್ ವಿಭಾಗದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಜಿ.ಎಚ್.ಎಸ್.ಎಸ್. ಬಂದಡ್ಕ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಲಿಪಿ ಪಿ.ಎಂ. ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿದ್ಯಾರಂಗದ ಕಥಾ ರಚನೆ ಸ್ಪರ್ಧೆಯಲ್ಲೂ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಈಕೆ ಬಂದಡ್ಕ ಪಾಲಾರು ಮೂಲೆಯ ವಿವೇಕಾನಂದ ಮತ್ತು ವಂಧ್ಯ ದಂಪತಿಯ ಪುತ್ರಿ.










