
ಸುಳ್ಯ ಬೊಳುಬೈಲು ಪೀಸ್ ಸ್ಕೂಲ್ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಟೇಕ್ವಾoಡೋ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ವಿಶೇಷ ಸಾಧನೆಯನ್ನು ಮಾಡಿದ್ದಾರೆ.















7 ನೇ ತರಗತಿ ವಿದ್ಯಾರ್ಥಿ ಗಳಾದ ಫಾತಿಮತ್ ಶಹಲ, ಮೊಹಮ್ಮದ್ ಹಯಾನ್,5 ನೇ ತರಗತಿ ವಿದ್ಯಾರ್ಥಿ ಗಳಾದ ಎಂ. ಎಚ್. ಆಯಿಷಾ ಹಾಗೂ ತನಾ ಫಾತಿಮ ಚಿನ್ನದ ಪದಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಬೆಳ್ಳಿ ಪದಕಗಳನ್ನು ಕ್ರಮವಾಗಿ 7 ನೇ ಹಾಗೂ 5ನೇ ತರಗತಿ ವಿದ್ಯಾರ್ಥಿ ಗಳಾದ ಸೋಹ ಫಾತಿಮ, ಇಹಸ್ಸಾನ್ ಅಹ್ಮದ್, ಇಶಾನ್
ಅಫ್ಸಲ್, ಸಾಹಿಲ್. ಯು. ಪಿ, ಫಾತಿಮ ಯಸ್ನಾ, ಇಹಸಾನ್ ಮೊಹಮ್ಮದ್ ಓವೈಸ್ ಇವರು ಗಳಿಸಿಕೊಂಡಿರುತ್ತಾರೆ. ಇವರಿಗೆ ಸಿಹಾಬ್ ಉಪ್ಪಿನಂಗಡಿ, ಹಾಗೂ ಹಾರಿಸ್ ರವರು ತರಬೇತಿ ನೀಡಿರುತ್ತಾರೆ.










