ಸುಳ್ಯ ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜನೆ

ಸುಳ್ಯದ ಇಂದಿರಾ ಕ್ಯಾಂಟೀನ್ ನಲ್ಲಿ ತಾಲೂಕು ಮಹಿಳಾ ಕಾಂಗ್ರೆಸ್ ವತಿಯಿಂದ ಇಂದಿರಾ ಗಾಂಧಿ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ಕೊಲ್ಚಾರ್ ರವರ ಅಧ್ಯಕ್ಷತೆ ಯಲ್ಲಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿಯವರು ಮಾತನಾಡಿ” ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರ ಜನ್ಮದಿನಾಚರಣೆ ಇಂದಿರಾ ಕ್ಯಾಂಟೀನ್ ನಲ್ಲಿ ನಡೆಸುವ ಮೂಲಕ ಇಂದಿರಾ ಗಾಂಧಿ ಯವರಿಗೆ ಬಡವರ ಮೇಲೆ ಇದ್ದ ಪ್ರೀತಿ ಮತ್ತು ಬ್ಯಾಂಕ್ ರಾಷ್ಟ್ರೀಕರಣ, ಉಳುವವನೇ ಹೊಲದ ಒಡೆಯ ಮೊದಲಾದ ಯೋಜನೆ ಜಾರಿಗೆ ತಂದಿರುವ ಶ್ರೀಮತಿ ಇಂದಿರಾಗಾಂಧಿ ಯವರ ಜನ್ಮ ದಿನದ ಆಚರಣೆ ಯನ್ನು ಇಂದಿರಾ ಕ್ಯಾಂಟೀನ್ ನಲ್ಲಿ ಆಯೋಜಿಸಿರುವುದು
ಅರ್ಥ ಪೂರ್ಣವಾಗಿದೆ ಎಂದು ಹೇಳಿದರು.
















ಈ ಸಂದರ್ಭದಲ್ಲಿ ನಗರ ಪಂಚಾಯತ್ ಮಾಜಿ ಸದಸ್ಯರಾದ ನಿವೃತ್ತ ಶಿಕ್ಷಕಿ ಪ್ರೇಮ ಟೀಚರ್ ರವರನ್ನು ಸನ್ಮಾನಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ. ಜಯರಾಮ,
ಮಹಿಳಾ ಕಾಂಗ್ರೆಸ್ ಉಸ್ತುವಾರಿ ಸರಸ್ವತಿ ಕಾಮತ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ಕೊಲ್ಚಾರ್, ಕೆಡಿಪಿ ಸದಸ್ಯರಾದ ಸುಜಯ ಕೃಷ್ಣ. ಜಿಲ್ಲಾ ಕಾಂಗ್ರೆಸ್ ಮಹಿಳಾ ಪದಾಧಿಕಾರಿಗಳಾದ ಸುಂದರಿ ಮುಂಡಡ್ಕ,ಅನುಸೂಯ ಬೆಳ್ಳಾರೆ, ನ.ಪಂ. ಸದಸ್ಯ ಧೀರ ಕ್ರಾಸ್ತ,ಮುಖಂಡರಾದ ಸಿದ್ದೀಕ್ ಕೊಕ್ಕೊ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಜಿ ಕೆ. ಹಮೀದ್ ಗೂನಡ್ಕ, ಸಚಿನ್ ರಾಜ್ ಶೆಟ್ಟಿ,ಜಲೀಲ್ ಬೆಳ್ಳಾರೆ,ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ. ಹನೀಫ್, ಸದಸ್ಯರಾದ ವಿಮಲಾ ಪ್ರಸಾದ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಕಾಂತಿ ಬಿ. ಎಸ್, ಮಾಜಿ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಚರಣ್ ಕಾಯರ, ಮಹೇಶ್ ಬೆಳ್ಳರ್ಕರ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.










