ಜಾಲ್ಸೂರಿನಲ್ಲಿ ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ

0

ಸಹಕಾರಿ ಕ್ಷೇತ್ರದ ಮೂಲಕ ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿ : ಕ್ಯಾ.ಬ್ರಿಜೇಶ್ ಚೌಟ

ಸಹಕಾರಿ‌ ಕ್ಷೇತ್ರವು ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಕೆಲಸ‌ ಮಾಡುತ್ತಿದೆ. ಇದರೊಂದಿಗೆ‌ ನಾವು ಸಹಕಾರಿ ಸಂಘದ ಮೂಲ ತತ್ವಕ್ಕೆ ಬದ್ಧವಾಗಿ ಮುನ್ನಡೆಯಬೇಕು ಎಂದು‌ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಕನಕಮಜಲು ‌ಸಹಕಾರಿ‌ ಸಂಘ ನಿ. ಜಾಲ್ಸೂರು ಇದರ ಆಶ್ರಯದಲ್ಲಿ‌ ವಿನೋಬಾನಗರದಲ್ಲಿ ನಡೆದ ಜಿಲ್ಲಾ ಮಟ್ಟದ 72 ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ‌ ಮಾತನಾಡಿದರು.

“ಅಡಿಕೆ ಬೆಳೆಗಾರರ ಅಭ್ಯದಯಕ್ಕೆ ನಾವು ಪ್ರಯತ್ನ ನಡೆಸಿದ್ದು, ಈ ಭಾಗದ ಸಮಸ್ಯೆಯನ್ನು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತರಲಾಗಿದೆ. ಈಗಾಗಲೇ ಚರ್ಚೆಗಳು‌ ನಡೆದಿದ್ದು ಮುಂದಿನ ತಿಂಗಳು ಸಚಿವರು ಈ ಭಾಗಕ್ಕೆ ಬಂದು ಕೃಷಿಕರೊಂದಿಗೆ ಸಂವಾದ ನಡೆಸುವ ಭರವಸೆ ನೀಡಿದ್ದಾರೆ” ಎಂದು‌ ಹೇಳಿದರು.

ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಿದ್ದರು.

ಶಾಸಕಿ ಭಾಗೀರಥಿ ಮುರುಳ್ಯ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.

ಸಹಕಾರ ಸಪ್ತಾಹದ ಅಂಗವಾಗಿ ನಡೆದ ಕ್ರೀಡೋತ್ಸವದ ಬಹುಮಾನವನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ವಿತರಿಸಿದರು.

ಸನ್ಮಾನ : ಸಮಾರಂಭದಲ್ಲಿ ಹಿರಿಯ ಸಹಕಾರಿ ಗಳಾದ ಜಾಕೆ‌ ಮಾಧವ ಗೌಡ, ದಿವಾಕರ ರೈ ಪಿ.ಬಿ., ನಿತ್ಯಾನಂದ ಮುಂಡೋಡಿ, ತೀರ್ಥರಾಮ ಎ.ಬಿ., ವಸಂತ ಜಿ.‌ಗಬ್ಬಲಡ್ಕ, ಜಯರಾಮ ರೈ ಕುರಿಯ ಹಾಗೂ 2025 ನೇ ಸಾಲಿನ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಪಿ.ಸಿ.ಜಯರಾಮರನ್ನು ಸನ್ಮಾನಿಸಲಾಯಿತು. ಕ್ಯಾಂಪ್ಕೋ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಡ್ಗಿ ಸನ್ಮಾನ ನೆರವೇರಿಸಿದರು.

ಶತಮಾನೋತ್ತರ ಸಂಘದ ಮಾಜಿ ಅಧ್ಯಕ್ಷರು ಹಾಗೂ 2024-25 ನೇ ಸಾಲಿನಲ್ಲಿ ನಿವೃತ್ತರಾದ ಸುಳ್ಯ ತಾಲೂಕಿನ ಸಹಕಾರ ಸಂಘಗಳ ನಿವೃತ್ತ ಸಿಬ್ಬಂದಿಗಳಿಗೆ ಗೌರವಾರ್ಪಣೆ ನಡೆಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ ಗೌರವಾರ್ಪಣೆ ನಡೆಸಿದರು.

ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ವಿಷ್ಣು ಭಟ್ ಮೂಲೆತೋಟ, ದ.ಕ. ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಭರತ್ ನೆಕ್ರಾಜೆ, ಸುಳ್ಯ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ., ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ಕನಕಮಜಲು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶಾರದಾ ಉಗ್ಗಮೂಲೆ, ಜಾಲ್ಸೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಅಡ್ಕಾರುಬೈಲು, ಸೋಣಂಗೇರಿ ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ರೈ ಎಸ್.ಎ. ಭಾಗವಹಿಸಿದ್ದರು.

ವಿಚಾರ ಮಂಡನೆ : ಸಹಕಾರ ಸಪ್ತಾಹ ಸಮಾರಂಭದಲ್ಲಿ ಜಾಗತಿಕ ಸ್ಪರ್ಧಾತ್ಮಕತೆಗಾಗಿ ನವನಾವೀನ್ಯತೆಯ ಸಹಕಾರಿ ವ್ಯವಹಾರದ ಮಾದರಿಗಳು ಎಂಬ ವಿಚಾರದಲ್ಲಿ ಡಿಸಿಸಿ ಬ್ಯಾಂಕ್ ನ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ನಾಯರ್ ಮಾತನಾಡಿದರು.

ಚಾಲನೆ : ಸಹಕಾರಿ ಸಪ್ತಾಹಕ್ಕೆ ಬೆಳಗ್ಗೆ ಕನಕಮಜಲು ಸಹಕಾರ ಸಂಘದ ವಠಾರದಲ್ಲಿ ಕನಕಮಜಲು ಹಾಲು ಉತ್ಪಾದಕರ ಸಹಕಾರ ಸಂಘದ‌ ಅಧ್ಯಕ್ಷ ರಾಮಪ್ರಸಾದ್ ಭಟ್ ಜಿ‌ ಚಾಲನೆ ನೀಡಿದರೆ, ವಾಹನ ಜಾಥಾಕೆ ಕನಕಮಜಲು ಸಹಕಾರ ಸಂಘದ ಮಾಜಿ ಅಧ್ಯಕ್ಷ ಚೆನ್ನಕೇಶವ ಜಾಲ್ಸೂರು ಚಾಲನೆ ನೀಡಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಕನಕಮಜಲು ಸಹಕಾರ ಸಂಘದ ಅಧ್ಯಕ್ಷ ಸುಧಾಕರ ಕಾಮತ್ ರವರು ಸಹಕಾರಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಭಾವಚಿತ್ರಕ್ಕೆ ಪುಷ್ಪ‌ನಮನ ಸಲ್ಲಿಸಲಾಯಿತು.‌

ದ.ಕ.‌ಜಿಲ್ಲಾ‌ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ.‌ಹಿರೇಮಠ, ಕನಕಮಜಲು ಸಹಕಾರಿ ಸಂಘದ ಉಪಾಧ್ಯಕ್ಷ ವೆಂಕಪ್ಪ ನಾಯ್ಕ ದೇರ್ಕಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕೆ., ಆಡಳಿತ ಮಂಡಳಿ ನಿರ್ದೇಶಕರುಗಳಾದ ಡಾ.ಗೋಪಾಲಕೃಷ್ಣ ಭಟ್, ಕುಸುಮಾಧರ ಅರ್ಭಡ್ಕ, ಗಂಗಾಧರ ಗೌಡ ಕಾಳಮನೆ, ತಿಲೋತ್ತಮ ಕೊಲ್ಲಂತಡ್ಕ, ಸುನಿಲ್ ಅಕ್ಕಿಮಲೆ, ಗಂಗಾಧರ ರೈ ಸೋಣಂಗೇರಿ, ಸಂದೀಪ್ ಕದಿಕಡ್ಕ, ಶ್ರೀಮತಿ ದಮಯಂತಿ ಲಿಂಗಪ್ಪ ಗೌಡ ಅಡ್ಕಾರು, ಶ್ರೀಮತಿ ವಿನುತ ಸಾರಕೂಟೇಲು, ನಿರಂಜನ ಬೊಳುಬೈಲು, ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ರತನ್ ಕೆ.ಎಸ್. ವೇದಿಕೆಯಲ್ಲಿ ಇದ್ದರು.

ಕನಕಮಜಲು ಸಹಕಾರ ಸಂಘದ ಅಧ್ಯಕ್ಷ ಸುಧಾಕರ ಕಾಮತ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು.

blob:https://web.whatsapp.com/19fdb26e-fc8c-455c-958a-12fd2a284be7

ಬೆಟ್ಟಂಪಾಡಿ ಡಿಗ್ರಿ ಕಾಲೇಜು ಪ್ರಾಂಶುಪಾಲ ದಾಮೋದರ ಕಣಜಾಲು‌ ಹಾಗೂ ಪ್ರಸಾದ್ ಕಾಟೂರು ಕಾರ್ಯಕ್ರಮ ನಿರೂಪಿಸಿದರು.