ಮಾಜಿ ಯೋಧ ದಿ. ಧನಂಜಯ ಬಾಳುಗೋಡು ಮನೆಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ

0

ದ.ಕ. ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟಇಂದು ಬಾಳುಗೋಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ
ಮಾಜಿ ಯೋಧ ದಿ.ಧನಂಜಯ ಬಾಳುಗೋಡು ಅವರ ಮನೆಗೆ ಸಂಸದರು ಬೇಟಿ ನೀಡಿದರು. ಧನಂಜಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಧನಂಜಯರ ಪತ್ನಿ ತನ್ನ ಪತಿಯ ಹೆಸರಲ್ಲಿರುವ ಗನ್‌ನ ಪರವಾನಗಿಯನ್ನು ತನ್ನ ಹೆಸರಿಗೆ ಮಾಡಿಕೊಂಡುವಂತೆ ಕೇಳಿಕೊಂಡರು. ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.


ಧನಂಜಯರು ನಿಧನರಾದಾಗ ಅವರ ಪಾರ್ಥೀವ ಶರೀರವನ್ನು ಅಡಿಕೆ ಮರದ ಪಾಲದಲ್ಲಿ ಸಾಗಿಸಲಾದ ಚಿತ್ರಗಳು ವೈರಲ್ ಆಗಿತ್ತು. ಅದೇ ಪಾಲದಲ್ಲಿ ಇಂದು ಸಂಸದರೂ ಧನಂಜಯರ ಮನೆಗೆ ನಡೆದು ಹೋದರು.