
ಲೋಕಸಭಾ ಸದಸ್ಯರಾದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಬಾಳುಗೋಡು ಗ್ರಾಮಕ್ಕೆ ಗ್ರಾಮ ಭೇಟಿ ಮಾಡಿದರು. ದಿ| ತಮ್ಮಯ್ಯ ಗೌಡ ಕ್ರೀಡಾಂಗಣ ಮುಚ್ಚಾರ – ಬೆಟ್ಟುಮಕ್ಕಿ ಇಲ್ಲಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ವೇದಿಕೆಯಲ್ಲಿ ಸುಳ್ಯ ವಿಧಾನಸಭಾ ಶಾಸಕಿ ಕುl ಭಾಗೀರಥಿ, ಸುಳ್ಯ ತಾಲೂಕು ಭಾಜಪ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ವಿನಯ್ ಮುಳುಗಾಡು, ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣಯ್ಯ ಮೂಲೆತೋಟ, ಸುಳ್ಯ ಬಿಜೆಪಿ ಕಾರ್ಯದರ್ಶಿ ವಿನಯ್ ಕಂದಡ್ಕ,, ಪ್ರದೀಪ್ ರೈ ಮನವಳಿಕೆ, ಮಲೆನಾಡು ಹಿತರಕ್ಷಣಾ ವೇದಿಕೆಯ ಕಿಶೋರ್ ಶಿರಾಡಿ, ಹರಿಹರ ಪಲ್ಲತಡ್ಕ ಗ್ರಾ.ಪಂ ಅಧ್ಯಕ್ಷ ವಿಜಯಕುಮಾರ್ ಅಂಙಣ, ಸುಳ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ,
ಸಹಕಾರ ಭಾರತಿ ಸುಳ್ಯ ತಾಲೂಕು ಒಕ್ಕೂಟ ಅಧ್ಯಕ್ಷ. ಡಾ। ಸೋಮಶೇಖರ್ ಕಟ್ಟೆಮನೆ,
ಬಿಜೆಪಿ ಬೂತ್ ಸಮಿತಿ ಬಾಳುಗೋಡು ಅಧ್ಯಕ್ಷ
ರಾಧಾಕೃಷ್ಣ ಕಟ್ಟೆಮನೆ, ಭಾ.ಜ.ಪಾ ಮಂಡಲ ಸಮಿತಿ ಸದಸ್ಯ ಚಂದ್ರಹಾಸ ಶಿವಾಲ
ಶಕ್ತಿಕೇಂದ್ರ ಬಾಳುಗೋಡು ಭಾ.ಜ.ಪಾ. ಸಮಿತಿ ಅಧ್ಯಕ್ಷ
ಜಯಂತ ಬಾಳುಗೋಡು ಉಪಸ್ಥಿತರಿದ್ದರು.















ಸಭೆಯಲ್ಲಿ ಸಭೆಯಲ್ಲಿ ಐನೆಕಿದು – ಕೋಟೆ – ಬಾಳುಗೋಡು- ಉಪ್ಪುಕಳ ಸಂಪರ್ಕ ರಸ್ತೆ, ಕಿರಿಭಾಗ – ಹರಿಹರ ಸಂಪರ್ಕ ರಸ್ತೆ ಹಾಗೂ ಕೊಪ್ಪತ್ತಡ್ಕ ಸೇತುವೆ, ಟವರ್ ಸಮಸ್ಯೆ, ಅರಣ್ಯ ಇಲಾಖೆ ಹಾಗೂ ಕಂದಾಯ
ಇಲಾಖೆಯ ಜಂಟಿ ಸರ್ವೆ, ಕಾಲೋನಿ ಸಮಸ್ಯೆ, ಯುವಕ ಮಂಡಲ, ಅಂಗನವಾಡಿ ಅಭಿವೃದ್ಧಿ ಬಗ್ಗೆ ಮನವಿಗಳು ಬಂದವು.
ಕುಸುಮಾ ಮಿತ್ತಡ್ಕ ಪ್ರಾರ್ಥಿಸಿದರು, ಚಂದ್ರಹಾಸ ಶಿವಾಲ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು.
.ರಾಧಾಕೃಷ್ಣ ಕಟ್ಟೆಮನೆ ವಂದಿಸಿದರು.
ಲೋಹಿತ್ ಮುಚ್ಚಾರ ಕಾರ್ಯಕ್ರಮ ನಿರೂಪಿಸಿದರು.














