
ಪ್ರೌಢಶಾಲಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಸುಳ್ಯದ ಸೈಂಟ್ ಜೋಸೆಫ್ ಶಾಲೆಯಲ್ಲಿ ನ.21 ರಂದು ನಡೆಯಿತು.
ಉದ್ಘಾಟನೆಯನ್ನು ಸಭಾಧ್ಯಕ್ಷತೆ ವಹಿಸಿದ ಸಂಸ್ಥೆಯ ಜೊತೆ ಕಾರ್ಯದರ್ಶಿ ಫಾದರ್ ಆಲ್ವಿನ್ ಎಡ್ವರ್ಡ್ ಡಿಕುನ್ಹಾ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.















ವೇದಿಕೆಯಲ್ಲಿ ಇ ಸಿ ಓ ಹಾಗೂ ನೋಡೆಲ್ ಅಧಿಕಾರಿ ಉದಯಕುಮಾರ್,ಸುಳ್ಯ ಕ್ಲಸ್ಟರ್ ಸಿ ಆರ್ ಪಿ ಯಾದ ಶ್ರೀಮತಿ ಮಮತಾ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ರಾದ ನವೀನ್ ಮಚಾದೊ, ಸೈಂಟ್ ಜೋಸೆಫ್ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೆಲ್ಲಾ, ಪ್ರೌಢಶಾಲಾ ವಿಭಾಗದ ಪಿ ಟಿ ಎ ಉಪಾಧ್ಯಕ್ಷೆಯಾದ ಶ್ರೀಮತಿ ಸುಮಲತಾ ಉಪಸ್ಥಿತರಿದ್ದರು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭ ಗೊಂಡಿತು. ನೋಡೆಲ್ ಅಧಿಕಾರಿ ಉದಯ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ನಂತರ ಸಿ ಆರ್ ಪಿ ಶ್ರೀಮತಿ ಮಮತಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ ಸಂಸ್ಥೆಯ ಜೊತೆ ಕಾರ್ಯದರ್ಶಿ ಫಾದರ್ ಆಲ್ವಿನ್ ಎಡ್ವರ್ಡ್ ಡಿಕುನ್ಹಾ ಕಾರ್ಯಕ್ರಮಕ್ಕೆ ಹಾಗೂ ಎಲ್ಲ ಸ್ಪರ್ಧಾಳುಗಳಿಗೆ ಶುಭ ಆಶೀರ್ವದಿಸಿದರು. ವಿದ್ಯಾರ್ಥಿಗಳು ತಮ್ಮ ಸ್ವಾಗತ ನೃತ್ಯದ ಮೂಲಕ ಎಲ್ಲರನ್ನೂ ಬರಮಾಡಿಕೊಂಡರು.
ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೆಲ್ಲಾ ಸ್ವಾಗತಿಸಿ, ಸಹಶಿಕ್ಷಕಿ ಶ್ರೀಮತಿ ದೇವಿಲತಾ ವಂದಿಸಿದರು. ಸಹಶಿಕ್ಷಕಿ ಶ್ರೀಮತಿ ಮಮತಾ ಕಾರ್ಯಕ್ರಮ ನಿರೂಪಿಸಿದರು.










