ನ. 24 : ಅರಂತೋಡು ಗ್ರಾಮ ಪಂಚಾಯತ್ ಘನ ತಾಜ್ಯ ಘಟಕದ ಮರು ನಿರ್ಮಾಣಕ್ಕೆ ಗುದ್ದಲಿ ಪೂಜೆ

0

ಗ್ರಾಮ ಆಡಳಿತ ಅಧಿಕಾರಿಯವರ ಕಚೇರಿ ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತರ

ವಿಶೇಷ ಗ್ರಾಮ ಸಭೆ- ಪಂಚಾಯತ್ ನೊಂದಿಗೆ ಕೈ ಜೋಡಿಸಿದ ಸಾಧಕರಿಗೆ ಗೌರವ

ಆಕಸ್ಮಿಕವಾಗಿ ಬೆಂಕಿ ಅವಘಡಕ್ಕೆ ತುತ್ತಾದ ರಾಜ್ಯದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆರಂತೋಡು ಗ್ರಾಮ ಪಂಚಾಯತ್ ನ ಕೊಡಂಕೇರಿ ಯಲ್ಲಿಯ ಘನ ತ್ಯಾಜ್ಯ ಘಟಕ ಮರು ನಿರ್ಮಾಣಕ್ಕೆ ಮತ್ತು ಅದಕ್ಕೆ ಸಂಪರ್ಕಿಸುವ ಉದಯನಗರ- ಕೊಡಂಕೇರಿ ರಸ್ತೆಯ ಕಾಂಗ್ರಿಟಿಕರಣದ ಗುದ್ದಲಿ ಪೂಜೆ ಕಾರ್ಯಕ್ರಮ ನವಂಬರ್ 24 ನೇ ಸೋಮವಾರದಂದು ಬೆಳಿಗ್ಗೆ 8.30ಕ್ಕೆ ಮಾನ್ಯ ಶಾಸಕರು, ವಿಧಾನಪರಿಷತ್ ಸದಸ್ಯರು,ಸರಕಾರದ ನಿಗಮ ಅಧ್ಯಕ್ಷರು,ಜನಪ್ರತಿನಿದಿನಗಳು ಅಧಿಕಾರಿಗಳು,ಘಟಕದ ಮರು ನಿರ್ಮಾಣಕ್ಕೆ ಧನ ಸಹಾಯ ನೀಡಿದ ದಾನಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಆರಂತೋಡು ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ತಿಳಿಸಿದ್ದಾರೆ.


ಗುದ್ದಲಿಪೂಜೆ ಕಾರ್ಯಕ್ರಮ ನಂತರ ಸಾರ್ವಜನಿಕರಿಗೆ ಒಂದೇ ಸೂರಿನಲ್ಲಿ ಸೌಕರ್ಯದ ಅನುಕೂಲಕಾಗಿ ಗ್ರಾಮ ಆಡಳಿತ ಅಧಿಕಾರಿಗಳ (V. A) ಕಚೇರಿ ಯನ್ನು ಪಂಚಾಯತ್ ಕಟ್ಟಡಕ್ಕೆ ಸ್ಥಳಾಂತರ ಕಾರ್ಯಕ್ರಮ ನಡೆಯಲಿದ್ದು. ಬೆಳಿಗ್ಗೆ 9.30ರಿಂದ ಪಂಚಾಯತ್ ಅಮೃತ ಸಭಾಂಗಣದಲ್ಲಿ ವಿಶೇಷ ಗ್ರಾಮ ಸಭೆ ನಡೆಯಲಿದ್ದು .ಈ ಸಭೆಯಲ್ಲಿ ಪಂಚಾಯತ್ ಗೆ ಗೌರವ ತಂದ ಸಾಧಕರಿಗೆ ಮತ್ತು ಪಂಚಾಯತ್ ನೊಂದಿಗೆ ಸಹಕರಿಸಿದರಿಗೆ ಗೌರವಿಸುವ ಕಾರ್ಯಕ್ರಮ ನಡೆಯಲಿದ್ದುನಡೆಯಲಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.