ಡಿ 13,14: ಮೊಗರ್ಪಣೆಯಲ್ಲಿ ತಾಜುಲ್ ಉಲಮಾ ಹಾಗೂ ಅಗಲಿದ ಗಣ್ಯರ ಅನುಸ್ಮರಣೆ

0

ಸ್ವಾಗತ ಸಮಿತಿ ರಚನೆ : ಅಧ್ಯಕ್ಷರಾಗಿ ಹಾಜಿ ಪಳ್ಳಿ ಕುಂಞಿ,ಕನ್ವೀನರಾಗಿ ಅಬ್ದುಲ್ ಜಬ್ಬಾರ್ ಲ್ಯಾಂಡ್ ಲಿಂಕ್ಸ್ ಆಯ್ಕೆ

ಮೊಗರ್ಪಣೆ ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸಾ ಎಸ್ ಬಿ ಎಸ್( ಸುನ್ನಿ ಬಾಲಸಂಘ) ವಿದ್ಯಾರ್ಥಿಗಳಿಂದ ವರ್ಷಂ ಪ್ರತಿ ಆಚರಿಸಿಕೊಂಡು ಬರುವ ತಾಜುಲ್ ಉಲಮಾ ಹಾಗೂ ನೂರುಲ್ ಉಲಮಾ ಮತ್ತು ಅಗಲಿದ ಗಣ್ಯ ನೇತಾರರ ಅನುಷ್ಮರಣೆ ಕಾರ್ಯಕ್ರಮ ಡಿ. 13 ಹಾಗೂ 14ರಂದು ಮೊಗರ್ಪಣೆ ಮಸೀದಿ ವಠಾರದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚನೆ ಮಾಡಿ ಅಧ್ಯಕ್ಷರಾಗಿ ಹಿರಿಯರಾದ ಹಾಜಿ ಪಳ್ಳಿ ಕುಂಞಿಯವರು ಹಾಗೂ ಕನ್ವೀನರಾಗಿ ಅಬ್ದುಲ್ ಜಬ್ಬಾರ್ ಲ್ಯಾಂಡ್ ಲಿಂಕ್ಸ್ ರವರು ಆಯ್ಕೆಯಾದರು. ಕೋಶಾಧಿಕಾರಿಯಾಗಿ ಹನೀಫ್ ಜಯನಗರ ಇವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ 20 ಮಂದಿ ಸದಸ್ಯರುಗಳನ್ನು ಆಯ್ಕೆ ಮಾಡಿ ಕಾರ್ಯಕ್ರಮದ ಯಶಸ್ವಿಗಾಗಿ ಪ್ರಥಮ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಸ್ಥಳೀಯ ಮಸೀದಿ ಮುದರ್ರಿಸ್ ಅಬ್ದುಲ್ ಖಾದರ್ ಸಖಾಫಿ ಮುದುಗಡ ಉಸ್ತಾದ್ ರವರು ದುವಾ ನೆರವೇರಿಸಿ ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಖಾಫಿ ನಿರೂಪಿಸಿ ವಂದಿಸಿದರು.
ಜಮಾತ್ ಕಮಿಟಿಯ ಪದಾಧಿಕಾರಿಗಳು ಸದಸ್ಯರುಗಳು ಹಾಗೂ ಮದರಸ ಅಧ್ಯಾಪಕವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.