ಬೆಂಗಳೂರಿನಲ್ಲಿ ಅರೆಭಾಷೆ ಪ್ರಶಸ್ತಿ ಪ್ರಧಾನ ಜಂಬರ ದಲ್ಲಿ ಎರಡನೇ ಪ್ರದರ್ಶನ
ಕರ್ನಾಟಕ ರಾಜ್ಯ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಆಯೋಜನೆಯಲ್ಲಿ ಸುಳ್ಯದ ಕಲಾವಿದರ ಕೂಡುವಿಕೆಯಲ್ಲಿ ಹೊಚ್ಚ ಹೊಸ “ಅಪ್ಪ” ಅರೆ ಭಾಷೆ ನಾಟಕದ ಪ್ರಥಮ ಪ್ರದರ್ಶನ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜು ಸಭಾಂಗಣದಲ್ಲಿ ನ. 27 ರಂದು ಸಂಜೆ ಪ್ರದರ್ಶನ ಕಾಣಲಿದೆ.
ನಾಟಕದ ನಿರ್ದೇಶಕರಾಗಿ ರಂಗ ಮಯೂರಿ ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು ರವರ ಸಮರ್ಥ ನಿರ್ದೇಶನದಲ್ಲಿ ಕಲಾ ತಂಡ ರೂಪುಗೊಂಡಿದೆ.
ಅರೆಭಾಷಿಗರಲ್ಲದ ಕಲಾವಿದರುಗಳು
ಈ ನಾಟಕದಲ್ಲಿ ಅಭಿನಯಿಸುತ್ತಿರುವುದು ನಾಟಕದ ಮತ್ತೊಂದು ವಿಶೇಷತೆಯಾಗಿದ್ದು ಕಲಾಸಕ್ತರಿಗೆ ಉಚಿತ ಪ್ರವೇಶವಾಗಿರುವುದು.















ಕಲಾವಿದರಾದ
ರೋಹಿತ್ ಮಲ್ಪೆ ಮತ್ತು
ದಿವಾಕರ್ ಕಟೀಲ್ ರವರ ಸಂಗೀತ ನಿರ್ದೇಶನದಲ್ಲಿ ಸುಮಾರು 6 ಹಾಡುಗಳು ನಾಟಕದಲ್ಲಿದೆ. ಖ್ಯಾತ ಗಾಯಕಿ ಶ್ರೀಮತಿ ಕಾವ್ಯವಾಣಿ ಕೊಡಗು ಹಾಗೂ ಗಾಯಕ ಶಿವಪ್ರಸಾದ್ ಆಲೆಟ್ಟಿ ಯವರು ಹಿನ್ನಲೆ ಧ್ವನಿ ನೀಡಿದ್ದಾರೆ.
ಪಾತ್ರ ವರ್ಗದಲ್ಲಿ ತಾಲೂಕಿನ ಕಲಾವಿದರಾದ ರಾಜ್ ಮುಖೇಶ್ ಬೆಟ್ಟಂಪಾಡಿ,
ವಿನೋದ್ ಮೂಡಗದ್ದೆ,ಶಶಿಕಾಂತ್ ಮಿತ್ತೂರ್,ಪ್ರಸನ್ನ ಅಚ್ಚಿಪಳ್ಳ,ಚೈತನ್ ಬೊಳ್ಳೂರು,ಸುನಿಲ್ ಅಜ್ಜಾವರ,ಯುವರಾಜ್ ಬಾಳೆಗುಡ್ಡೆ,ತಿರುಮಲೇಶ್ವರಿ ಅರ್ಬಡ್ಕ,ಪ್ರಾಪ್ತಿ ಆಲಂಕಲ್ಯ,ಅರ್ಪಿತಾ ಚೊಕ್ಕಾಡಿ,ಮೌರ್ಯ ನಾರ್ಕೋಡು, ಸುನಂದಾ ಶೆಟ್ಟಿ, ಗ್ರೀಷ್ಮ ಕೇದ್ಕಾರ್, ಗೌತಮ್ ಎಂ ಬಿ.,ಗೌತಮಿ ಬಂಗಾರ್ ಕೊಡಿ, ಕೆ.ಟಿ.ಭಾಗೀಶ್,ಚಂದ್ರಶೇಖರ ಪೇರಾಲ್,ನಿತ್ಯಾನಂದ ಮಲೆಯಾಳ ರವರು ಅಭಿನಯಿಸುತ್ತಿದ್ದಾರೆ.
ರಂಗ ವಿನ್ಯಾಸ ಮಹೇಶ್ ಆಚಾರಿ ಹೊನ್ನಾವರ,
ಬೆಳಕು ಪ್ರಶಾಂತ್ ಬೆಳ್ಳಾರೆ,
ಪ್ರಸಾಧನ ಶಿವರಾಮ ಕಲ್ಮಡ್ಕ,ರಂಗ ನಿರ್ವಹಣೆ ರಾಜ್ ಮುಕೇಶ್,ವಿನೋದ್ ಮೂಡಗದ್ದೆ,
ಕಾಸ್ಟ್ಯೂಮ್ ನಿರ್ವಹಣೆ ಗ್ರೀಷ್ಮಕೇದ್ಕಾರ್,ಸುನಂದ ಶೆಟ್ಟಿ,ಸೌಮ್ಯ ಆಲಂಕಲ್ಯ
ಪ್ರಾಪರ್ಟಿ ನಿರ್ವಹಣೆ ಶಶಿಕಾಂತ್ ಮಿತ್ತೂರ್,ಸುನಿಲ್ ಅಜ್ಜಾವರ,ಪ್ರಸನ್ನ, ಯುವರಾಜ್ ಸಹಕರಿಸುತ್ತಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನಿರ್ಮಾಣದಲ್ಲಿ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ರಿಜಿಸ್ಟ್ರಾರ್ ಚಿನ್ನಸ್ವಾಮಿ ಯವರ ಮತ್ತು ಅಕಾಡೆಮಿಯ
ಸರ್ವ ಸದಸ್ಯರ ಸಹಕಾರದಲ್ಲಿ ನಿರ್ಮಾಣ ಗೊಂಡ ಅರೆಭಾಷೆ ನಾಟಕದ ಎರಡನೇ ಪ್ರದರ್ಶನ ನ. 30 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿರುವ ಆರೆಭಾಷೆ ಪ್ರಶಸ್ತಿ ಪ್ರದಾನ ಜಂಬರದಲ್ಲಿ ಸಂಜೆ ಪ್ರದರ್ಶನ ವಾಗಲಿರುವುದು.










