ಸುಳ್ಯ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

0

ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿಯಲ್ಲಿ ನ 20 ರಂದು ರೋಸಾರಿಯೋ ಪ್ರೌಢಶಾಲೆ ಮಂಗಳೂರಿನಲ್ಲಿ ನಡೆದ ಜಿಲ್ಲಾಮಟ್ಟದ ಪಾತ್ರಾಭಿನಯ ಮತ್ತು ಜನಪದ ಸ್ಪರ್ಧೆಯಲ್ಲಿ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ 8 ಮತ್ತು 9ನೆ ತರಗತಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸೇಫ್ ಯುಸ್ ಆಫ್ ಗ್ಯಾಜೆಟ್ಸ್ ಎಂಬ ವಿಷಯದ ಪಾತ್ರಭಿನಯದಲ್ಲಿ ವಿದ್ಯಾರ್ಥಿಗಳಾದ ಅನುಷಾ ಕೆ, ನಿರೀಕ್ಷ ಪಿ, ಚಿನ್ಮಯಿ ಪಿ, ಆತ್ಮಿಕ ಜಿ ಸಿ .ಚರೇಶ್ ಪಿ ಜಿ ಭಾಗವಹಿಸಿದ್ದರು ಹಾಗೂ ಪರಿಸರ ಸಂರಕ್ಷಣೆಯಲ್ಲಿ ಪ್ಲಾಸ್ಟಿಕ್ ನಿರ್ವಹಣೆ ಎಂಬ ವಿಷಯದ ಕುರಿತು ಸ್ವಾತಿ ಕೆ ಟಿ, ಪೂಜಾಶ್ರೀ ಕೆ ಟಿ, ಶಮ್ಯ ಬಿ ಜೆ, ವೈಷ್ಣವಿ ಎಂ,ಸಾನ್ವಿ ಪಿ ಎನ್ , ಜನನಿ ಎಸ್ ಬಿ ಕಂಗಿಲು ಜನಪದ ನೃತ್ಯದ ಮೂಲಕ ವಿವರಿಸಿದ್ದಾರೆ .
ಶಾಲಾ ಉಪ ಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ಮತ್ತು ಶಿಕ್ಷಕಿಯರಾದ ಪೂರ್ಣಿಮಾ ಟಿ ಮತ್ತು ಲತಾ ವೆಂಕಟೇಶ್ ಪೈ ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿರುತ್ತಾರೆ.