ಮೇಘಾ ಪಿ.ಎಂ. ಕೆ.ಸೆಟ್ ಪರೀಕ್ಷೆಯಲ್ಲಿ ತೇರ್ಗಡೆ

0

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲ್ಪಡುವ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಯಲ್ಲಿ (ಕೆಸೆಟ್ -೨೦೨೫) ರಲ್ಲಿ ಮೇಘಾ ಪಿ.ಎಂ. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಇವರು ಪೂಜಾರಿಮನೆ ಮಾಧವ ಮಾಸ್ಟರ್ ಹಾಗೂ ಗೂನಡ್ಕ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಶೀಲಾವತಿ ಕೆ.ಎನ್. ಇವರ ಪುತ್ರಿ.
ಮೇಘಾ ಪಿ.ಎಂ. ರೋಟರಿ ಶಾಲೆ ಸುಳ್ಯ, ಅಂಬಿಕಾ ಪದವಿ ಪೂರ್ವ ಕಾಲೇಜು ಪುತ್ತೂರು, ಎನ್.ಎಂ.ಸಿ. ಸುಳ್ಯದ ಹಳೆ ವಿದ್ಯಾರ್ಥಿನಿ. ಮಂಗಳೂರು ವಿಶ್ವ ವಿದ್ಯಾಲಯ ಮಂಗಳೂರು ಗಂಗೋತ್ರಿಯಲ್ಲಿ ೨೦೨೫ನೇ ಸಾಲಿನಲ್ಲಿ ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಯನ್ನು ಪಡೆದಿದ್ದಾರೆ.