ಬೆಟ್ಟುಮಕ್ಕಿ, ಗೋರ್ತಿಲ, ಪನ್ನೆ, ಮಿತ್ತಡ್ಕ, ಪುಣೇರಿ ಕಾಲನಿ ನಿವಾಸಿಗಳಿಂದ ‘ಮತಕ್ಕಾಗಿ ನಮ್ಮ ಮನೆಗೆ ಬರಬೇಡಿ’ ಎಂಬ ಬರಹ

ಹರಿಹರ ಪಲ್ಲತಡ್ಕ ಗ್ರಾ.ಪಂ ನ
ಬಾಳುಗೋಡಿನಲ್ಲಿ ಮತದಾನ ಬಹಿಷ್ಕಾರ ಬ್ಯಾನರ್ ಇಂದು ಪ್ರತ್ಯಕ್ಷವಾಗಿದೆ.
ಬಾಳುಗೋಡು ಗ್ರಾಮದ ಬೆಟ್ಟುಮಕ್ಕಿ, ಗೋರ್ತಿಲ, ಪನ್ನೆ, ಮಿತ್ತಡ್ಕ, ಪುಣೇರಿ ಸ್ಥಳಗಳಲ್ಲಿ ಸುಮಾರು 50 ವರ್ಷಗಳಿಂದ ಖಾಯಂ ನಿವಾಸಿಗಳಾಗಿದ್ದು ಮೂಲಭೂತ ಸೌಲಭ್ಯಗಳಾದ ರಸ್ತೆ, ಹಕ್ಕುಪತ್ರ, ಮನೆ, ನೀರು, ಸ್ಮಶಾನದ ಸ್ಥಳ ಇವುಗಳಿಗಾಗಿ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ಮಾಡಿರುತ್ತೇವೆ ಮತ್ತು ಎಲ್ಲಾ ಇಲಾಖೆಗಳಿಗೆ ಮನವಿಯನ್ನು ನೀಡಿರುತ್ತೇವೆ.
















ಸುಮಾರು ವರುಷಗಳಿಂದ ತಾಲೂಕು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆಯುವ ದಲಿತ ಕುಂದುಕೊರತೆ ನಿವಾರಣಾ ಸಮಿತಿಯ ಸಭೆಯಲ್ಲಿ ಪ್ರಸ್ತಾಪಿಸಿ ಮನವಿಯನ್ನು ನೀಡಿದರೂ ಈ ತನಕ ಯಾವುದೇ ಪ್ರಯೋಜನ ಆಗಿರುವುದಿಲ್ಲ. ಮೇಲೆ ತಿಳಿಸಿದ ಸ್ಥಳಗಳು ಸರಕಾರಿ ಸ್ಥಳವಾಗಿದ್ದರೂ 94ಸಿ ಯಲ್ಲಿ ನೀಡಿರುವ ಅರ್ಜಿಯು ವಿಲೇಯಾಗಿರುವುದಿಲ್ಲ. ಆದ್ದರಿಂದ ಮೇಲೆ ತಿಳಿಸಿದ ಸ್ಥಳಗಳನ್ನು ಮತ್ತೆ ಪರಿಶೀಲಿಸಿ ನಮಗೆ ಮೂಲಭೂತ ಸೌಲಭ್ಯಗಳನ್ನು ಮುಂಬರುವ ಚುನಾವಣೆಗೆ ಮೊದಲು ಕೊಡಿಸದಿದ್ದಲ್ಲಿ ನಾವೆಲ್ಲರೂ ಮುಂದಿನ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಪುಣೇರಿ ಬಳಿ ಅಳವಡಿಸಲಾದ ಬ್ಯಾನರ್ ನಲ್ಲಿ ಬರೆಯಲಾಗಿದೆ. ಅಲ್ಲದೆ ಮನೆಯೊಂದರ ಗೋಡೆ ಮೇಲೆ ಮತಕ್ಕಾಗಿ ನಮ್ಮ ಮನೆಗೆ ಬರಬೇಡಿ ಎಂಬ ಬರಹ ಬರೆಯಲಾಗಿದೆ.










