ಮುಕ್ಕೂರು – ಪೆರುವಾಜೆ ವೈಷ್ಣವಿ ಮಹಿಳಾ ಮಂಡಲ ರಚನೆ

0

ಅಧ್ಯಕ್ಷೆ ಶ್ರೀಮತಿ ಸುಮಿತ್ರ ಬೀರುಸಾಗು, ಕಾರ್ಯದರ್ಶಿ ಪ್ರೀತಿ ರೈ ಬರೆಮೇಲು ಆಯ್ಕೆ

ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪೆರುವೋಡಿ ಇದರ ವಠಾರದಲ್ಲಿ ಆಸಕ್ತ ಮಹಿಳೆಯರ ಸಭೆ ಕರೆದು ಮಹಿಳಾ ಮಂಡಲವನ್ನು ನ.23 ರಂದು ರಚಿಸಲಾಯಿತು.ಸಭೆಯಲ್ಲಿ ಚರ್ಚಿಸಿ ಮಹಿಳಾ ಮಂಡಲಕ್ಕೆ ಶ್ರೀ ವೈಷ್ಣವಿ ಮಹಿಳಾ ಮಂಡಲ ಮುಕ್ಕೂರು-ಪೆರುವಾಜೆ ಎಂದು ನಾಮಕರಣ ಮಾಡಲಾಯಿತು.ಅಧ್ಯಕ್ಷೆಯಾಗಿ ಶ್ರೀಮತಿ ಸುಮಿತ್ರಾ ಬಿ .ಸಿ . ಬೀರುಸಾಗು,ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಪ್ರೀತಿ ರೈ. ಬರೆಮೇಲು,ಉಪಾಧ್ಯಕ್ಷರಾಗಿ ಶ್ರೀಮತಿ ಗುಲಾಬಿ ಬೊಮ್ಮೆಮಾರು ,ಕೋಶಾಧಿಕಾರಿಯಾಗಿ ಶ್ರೀಮತಿ ಉಷಾ ಕೂರೋಡಿ,ಜೊತೆಕಾರ್ಯದರ್ಶಿಯಾಗಿ ಶ್ರೀಮತಿ ಹರ್ಷಾವತಿ ಕಾನಾವುಜಾಲು,ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಶ್ರೀಮತಿ ಪೂರ್ಣಿಮಾ ಯನ್. ಕೆ.ಕೊಂಡೆಪ್ಪಾಡಿ ,ಶ್ರೀಮತಿ ಕಾವೇರಿ ನೀರ್ಕಜೆ,ಶ್ರೀಮತಿ ಸೌಮ್ಯ .ರೈ.ಬರಮೇಲು, ,ಶ್ರೀಮತಿ ಸುನೀತಾ ಕoರ್ಬುತ್ತೋಡಿ, ಶ್ರೀಮತಿ ಪದ್ಮಾವತಿ ದೇವುಮೂಲೆ ಶ್ರೀಮತಿ ಲತಾ ಬೈಲಂಗಡಿ, ಶ್ರೀಮತಿ ಪ್ರೇಮಾ ಕoರ್ಬುತ್ತೋಡಿ ಇವರುಗಳನ್ನು ಸೂಚಿಸಿ ಅನುಮೋದಿಸಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ತಾಲೂಕು ಯುವಜನ ಸಂಯುಕ್ತ ಮಂಡಳಿಯ ಉಪಾಧ್ಯಕ್ಷೆ ಶ್ರೀಮತಿ ವಿನುತಾ ಪಾತಿಕಲ್ಲು ರವರು ಸಭೆಯಲ್ಲಿ ಉಪಸ್ಥಿತರಿದ್ದು ಮಹಿಳಾ ಮಂಡಲಗಳ ಅವಶ್ಯಕತೆ ಮಹಿಳಾ ಮಂಡಲಗಳ ಕಾರ್ಯ ಚಟುವಟಿಕೆಗಳು ,ಮಹಿಳಾ ಮಂಡಲದಲ್ಲಿ ಮಹಿಳೆಯರ ಜವಾಬ್ದಾರಿಗಳು ಮತ್ತು ಸಮಾಜಕ್ಕೆ ಮಹಿಳಾ ಮಂಡಲಗಳ ಕೊಡುಗೆಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಇಂದು ರಚನೆಯಾದ ಮಹಿಳಾ ಮಂಡಲವು ಮಹಿಳೆಯರ ಸಕ್ರೀಯ ಪಾಲ್ಗೊಳ್ಳುವಿಕೆಯಿಂದ ಸಮಾಜಮುಖಿ ಕಾರ್ಯಗಳ ಮೂಲಕ ಮಾದರಿ ಮಹಿಳಾ ಮಂಡಲವಾಗಿ ಮೂಡಿಬರುವಲ್ಲಿ ಭಗವಂತನ ಅನುಗ್ರಹವಿರಲಿ ಎಂದು ಪ್ರಾರ್ಥಿಸಿ ಶುಭಹಾರೈಸಿದರು.

ವೇದಿಕೆಯಲ್ಲಿ ಕ್ಷೇತ್ರದ ಅರ್ಚಕರಾದ ಶ್ರೀ ಸುರೇಶ್ ಉಪಾಧ್ಯಾಯ,ಕ್ಷೇತ್ರದ ಮೊಕ್ತೇಸರ ಕುಶಾಲಪ್ಪ ಗೌಡ ಪೆರುವಾಜೆ,ಜ್ಯೋತಿ ಯುವಕ ಮಂಡಲದ ಅಧ್ಯಕ್ಷರಾದ ದಿನೇಶ್ ಕoರ್ಬುತ್ತೋಡಿ,ಹಾಗೂ ಪಂಚಾಯತ್ ಸದಸ್ಯೆ ಶ್ರೀಮತಿ ಗುಲಾಬಿ ,ಯುವಸೇನೆಯ ಸಂತೋಷ್ ನೀರ್ಕಜೆ ಹಾಗೂ ಜನಿತ್ ಸಂಕೇಶ ಇವರುಗಳು ಉಪಸ್ಥಿತರಿದ್ದರು.ಸಭೆಯಲ್ಲಿ ಹಾಜರಿದ್ದ ಇತರ ಮಹಿಳೆಯರನ್ನು ಹಾಗೂ ಇನ್ನೂ ಸೇರಲಿಚ್ಚಿಸಿರುವ ಮಹಿಳೆಯರನ್ನು ಸಾಮಾನ್ಯ ಸದಸ್ಯರುಗಳಾಗಿ ನೇಮಿಸಿಕೊಳ್ಳುವುದೆಂದು ತೀರ್ಮಾನಿಸಲಾಯಿತು.

ಶಾರದೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ನಾರಾಯಣ ಕೊಂಡೆಪ್ಪಾಡಿ ಇವರು ಕಾರ್ಯಕ್ರಮ ನಿರೂಪಿಸಿ ಮಹಿಳಾ ಮಂಡಲ ರಚನೆಯ ಅವಶ್ಯಕತೆಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ ಮಹಿಳಾ ಮಂಡಲದ ಎಲ್ಲಾ ಕಾರ್ಯಚಟುವಟಿಕೆಗಳಿಗೆ ನಮ್ಮೆಲ್ಲಾ ಸಂಘ ಸಂಸ್ಥೆಗಳ ಸಂಪೂರ್ಣ ಸಹಕಾರ ಬೆಂಬಲ ನೀಡುವುದಾಗಿ ಹೇಳಿದರು. ಕಾರ್ಯದರ್ಶಿ ಶ್ರೀಮತಿ ಪ್ರೀತಿ ರೈ.ವಂದಿಸಿದರು.