
ಕಂದ್ರಪ್ಪಾಡಿ ಸರಕಾರಿ ಶಾಲೆಗೆ ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆದ ಪೋಷಕ ಶಿಕ್ಷಕ ಸಭೆಯಲ್ಲಿ ಗುತ್ತಿಗಾರು ಲಯನ್ಸ್ ಅಧ್ಯಕ್ಷರಾದ ಪ್ರವೀಣ್ ಮುಂಡೋಡಿ ಯವರು ತಮ್ಮ ಮಾತ್ರಶ್ರೀಯವರಾದ ಶ್ರೀಮತಿ ಧರ್ಮಾವತಿ ಮುಂಡೋಡಿ ಇವರ ಹೆಸರಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ಹಾಗೂ ಲೇಖನ ಸಾಮಗ್ರಿಗಳನ್ನು ನೀಡಿದರು.
















ಈ ಸಭೆಯಲ್ಲಿ ಲಯನ್ಸ್ ಕ್ಲಬ್ ಗುತ್ತಿಗಾರಿನ ಸ್ಥಾಪಕ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ವಿನೋದ್ ಕುಮಾರ್ ಮುಂಡೋಡಿ, ಕುಶಾಲಪ್ಪ ಮಾಸ್ತರ್ ತುಂಬತ್ತಾಜೆ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀಮತಿ ವೀಣಾ ಕುಮಾರಿ ಶಾಲಾ ಮುಖ್ಯಗುರುಗಳಾದ ವಾಣಿ ಎಸ್ ಕೆ , ಪೋಷಕರು, ಶಾಲಾ ಶಿಕ್ಷಕ ವೃಂದದವರು, ಹಿರಿಯ ವಿದ್ಯಾರ್ಥಿಗಳು , ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು . ಶಾಲಾ ಪದವೀಧರ ಪ್ರಾಥಮಿಕ ಶಿಕ್ಷಕಿಯಾದ ಆಶಾರಾಣಿ ಇವರು ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ವಾಣಿ ಸ್ವಾಗತಿಸಿ, ವಂದಿಸಿದರು










