ಕಾಡಾನೆ ಸಹಿತ ವನ್ಯಜೀವಿಗಳಿಂದ ಕೃಷಿ ನಾಶ : ಶಾಶ್ವತ ಪರಿಹಾರಕ್ಕೆ ಆಗ್ರಹ

0

ಮಂಡೆಕೋಲಿನಲ್ಲಿ ಕೃಷಿಕರ ಬೃಹತ್ ಮೆರವಣಿಗೆ – ಪ್ರತಿಭಟನೆ

ಕೃಷಿಕರ ಜೀವ ಮತ್ತು ಕೃಷಿ ರಕ್ಷಣೆಗಾಗಿ ಹೋರಾಟ ಅನಿವಾರ್ಯ

ಕಾಡಾನೆ ಸಹಿತ ವನ್ಯ ಮೃಗಗಳಿಂದ ನಿರಂತರ ಕೃಷಿ ನಾಶವಾಗುತ್ತಿದ್ದು ಇಲಾಖೆ ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮಂಡೆಕೋಲು ಗ್ರಾಮಸ್ಥರು ಬೃಹತ್ ಪ್ರತಿಭಟನೆ ಮಂಡೆಕೋಲು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ನಡೆಯಿತು.

ಬೆಳಗ್ಗೆ ಸುಮಾರು 10 ಕ್ಕೆ ಪಂಚಾಯತ್ ಎದುರು ಸೇರಿದ ಗ್ರಾಮಸ್ಥರು ಕಾಡಾನೆ, ವನ್ಯಮೃಗಗಳಿಂದ ಕೃಷಿ‌ ನಾಶ ತಡೆಯಿರಿ ಎಂಬ ಘೋಷಣೆ ಕೂಗಿಕೊಂಡು ಮಂಡೆಕೋಲು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.

ಹೋರಾಟ‌ ಸಮಿತಿಯ ಅಧ್ಯಕ್ಷರಾದ ಸುರೇಶ್ ‌ಕಣೆಮರಡ್ಕರು ಮಾತನಾಡಿ
“ಕೇರಳದ ಜನವಸತಿ ಪ್ರದೇಶಕ್ಕೆ ಆನೆಗಳು ಬಾರದಂತೆ ಅಲ್ಲಿಯ ಸರಕಾರ ಕ್ರಮಕೈಗೊಂಡಿದೆ. ಅದೇ ರೀತಿಯ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು. ಕಾಡು ವನ್ಯಮೃಗಗಳಿಗೆ ಇರುವುದು ನಿಜ. ಹಾಗಂತ ಆ ಮೃಗಗಳು ನಾಡಿಗೆ ಬಾರದಂತೆ ಇಲಾಖೆಗಳು, ಸರಕಾರ ಕ್ರಮಕೈಗೊಳ್ಳಬೇಕು. ನಮ್ಮ ಅರಣ್ಯ ಪ್ರದೇಶಕ್ಕೆ ಸೋಲಾರ್ ಫೆನ್ಸಿಂಗ್ ಸಹಿತ ಶಾಶ್ವತ ಪರಿಹಾರ ಮಾಡಬೇಕು. ಅಧ್ಯಯನ ‌ಮಾಡಿ‌ಕಾರ್ಯ ಪ್ರವೃತ್ತರಾಗಬೇಕು” ಎಂದು ಅವರು ಆಗ್ರಹಿಸಿದರು.

ಮೆರವಣಿಗೆಗೆ ಚಾಲನೆ ನೀಡಿದ ಡಾ. ಅನಂತ ಪದ್ಮನಾಭ ಭಟ್ ಮಾತನಾಡಿ, ಕೃಷಿ ತೋಟವನ್ನು ಆನೆಗಳು ಪುಡಿಗಟ್ಟಿರುವುದರಿಂದ ನಮಗೆ ಹೋರಾಟ ಅನಿವಾರ್ಯವಾಗಿದೆ” ಎಂದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ಜಯರಾಜ್ ಕುಕ್ಕೆಟ್ಟಿ ಮಾತನಾಡಿ, ಸವಾಲಿನ ಮಧ್ಯೆ ಮಂಡೆಕೋಲಿನ ಜನರು ಬದುಕುವ ಸ್ಥಿತಿ ಎದುರಾಗಿದೆ. ಒಂದು‌ಕಡೆಯಿಂದ ಕೃಷಿಗೆ ಬೇರೆ ಬೇರೆ ರೋಗ ಎದುರಾದರೆ, ಅದನ್ನು ಉಳಿಸೋಣ ಎಂದು ಏನೇ ಪ್ರಯತ್ನ ಪಟ್ಟರು ವನ್ಯ ಮೃಗಗಳು ತೋಟಕ್ಕೆ ಬಂದು ಕೃಷಿ ನಾಶ ಪಡಿಸುತ್ತಿದೆ. ಇದಕ್ಕೆ ಶಾಸ್ವತ ಪರಿಹಾರ ಸಿಗಬೇಕು ಎಂದ ಅವರು ಕೋವಿ ನವೀಕರಣ ಸರಳೀಕರಣ ಮಾಡುವಲ್ಲಿ ಇಲಾಖೆ‌ ಕೃಷಿಕರಿಗೆ ಸಹಕಾರ ನೀಡಬೇಕು” ಎಂದರು.

ಕೃಷಿಕರಾದ ಪ್ರಭಾಕರ ರೈ ಪಿ.ಬಿ., ಕೆ.ಪಿ. ಜಗದೀಶ್, ಕಿಶೋರ್ ಶಿರಾಡಿ, ಅವಿನಾಶ್ ಕುರುಂಜಿ, ಕರುಣಾಕರ ಅಡ್ಯಡ್ಕ, ಸುದರ್ಶನ ಪಾತಿಕಲ್ಲು

ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ, ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಬಾಲಚಂದ್ರ ದೇವರಗುಂಡ, ರಾಮಚಂದ್ರ ಮಾಸ್ತರ್ ಕೇನಾಜೆ, ಜಯರಾಜ್ ಕುಕ್ಕೆಟ್ಟಿ, ವಿನುತಾ ಪಾತಿಕಲ್ಲು, ಸುರೇಶ್ ದೇವರಗುಂಡ, ಶಶಿಧರ್ ಕಲ್ಲಡ್ಕ, ಪುರುಷೋತ್ತಮ ಬೇಂಗತ್ತಮಲೆ, ಜನಾರ್ದನ ಬೊಳುಗಲ್ಲು, ಪದ್ಮನಾಭ ಪಾತಿಕಲ್ಲು, ಗಂಗಾಧರ ಮಾವಂಜಿ, ದೇವದಾಸ್ ಕುಕ್ಕುಡೇಲು, ವಾಸುದೇವ ಬತ್ಲಿಮನೆ, ಉದಯ‌ಕುಮಾರ್ ಆಚಾರ್, ಹರಿಶ್ಚಂದ್ರ ಪಾತಿಕಲ್ಲು, ಮೋಹಿನಿ ಚಂದ್ರಶೇಖರ, ವಸಂತಿ ಮಂಡೆಕೋಲುಬೈಲು, ವಸಂತಿ ಉಗ್ರಾಣಿಮನೆ, ಕೇಶವ ಮೂರ್ತಿ ಹೆಬ್ಬಾರ್, ಗುರು ರಾಘವೇಂದ್ರ ಹೆಬ್ಬಾರ್, ಅನಿಲ್ ತೋಟಪ್ಪಾಡಿ, ನವೀನ್ ಮುರೂರು, ಲಕ್ಷ್ಮಣ ಉಗ್ರಾಣಿಮನೆ, ಶುಭಕರ ಬೊಳುಗಲ್ಲು, ಸುರೇಶ್ ಚೌಟಾಜೆ, ಅನಂತಕೃಷ್ಣ ಚಾಕೋಟೆ, ಗಣೇಶ್ ಮಾವಂಜಿ, ಚಂದ್ರಜಿತ್ ಮಾವಂಜಿ, ಪುರುಷೋತ್ತಮ ‌ಕಾಡುಸೊರಂಜ, ಶ್ರೀಹರಿ ಬೊಳುಗಲ್ಲು, ಸುಂದರ ಗೌಡ ಕಾಡುಸೊರಂಜ, ಲಿಂಗಪ್ಪ ಬದಿಕಾನ, ಪೋಕರೆ‌ಕುಂಞಿ‌ ಬಳ್ಳಕಜೆ, ಶಿವರಾಮ ಕೇನಾಜೆ, ರಾಮಕೃಷ್ಣ ರೈ ಪೇರಾಲುಗುತ್ತು, ಸುನಿಲ್ ಪಾತಿಕಲ್ಲು, ನಾಗೇಶ ದೇವರಗುಂಡ, ಪುಟ್ಟಣ್ಣ ಮಂಡೆಕೋಲು, ಜನಾರ್ದನ ಬರೆಮೇಲು, ನಾರಾಯಣ ಕೆದ್ಕಾರ್, ಚಂದ್ರಶೇಖರ ಕೋಡ್ತುಗುಳಿ, ರಾಮಚಂದ್ರ ಯದುಗಿರಿ, ವಿಕಾಸ್ ಮೀನಗದ್ದೆ, ಪದ್ಮಾವತಿ ಪೆರಾಜೆ, ವೀಣಾ ದೇವರಗುಂಡ, ನವೀನ್ ಯಾವಟೆ, ಪದ್ಮಾವತಿ ಪೆರಾಜೆ, ಮಮತಾ ಬೊಳುಗಲ್ಲು, ಮುಕುಂದ ಬೊಳುಗಲ್ಲು, ಜಲಜಾ ದೇವರಗುಂಡ ಮೊದಲಾದವರಿದ್ದರು.

ಶಿವಪ್ರಸಾದ್ ಉಗ್ರಾಣಿಮನೆ ‌ಕಾರ್ಯಕ್ರಮ‌ ನಿರ್ವಹಿಸಿದರು.