ಸುಳ್ಯ: ಗಾಂಧಿನಗರ ಚರಂಡಿ ಸ್ಲಾಬ್ ಮುರಿದು ಅಪಾಯಕ್ಕೆ ಆಹ್ವಾನ

0

ಸುಳ್ಯ ಗಾಂಧಿನಗರ ರಥಬೀದಿ ಬಳಿ ಚರಂಡಿಯ ಸ್ಲಾಬ್ ಕಲ್ಲು ಮುರಿದು ಬಿದ್ದು ಬೃಹತ್ ರಂದ್ರ ನಿರ್ಮಾಣವಾಗಿದೆ.

ಈ ಭಾಗದಲ್ಲಿ ನಡೆದಾಡುವ ಪಾದಚಾರಿಗಳು ಎಚ್ಚರ ತಪ್ಪಿದರೆ ಅಪಾಯ ಖಚಿತವಾಗಿರುತ್ತದೆ.
ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಗಮನಿಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.