ಕುಕ್ಕೆ ಸುಬ್ರಹ್ಮಣ್ಯದಲ್ಕಿ ರಥಗಳ ಶಿಖರ (ಕಲಶ )ಪೂಜೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಟಿ ಮಹೋತ್ಸವದ ಅಂಗವಾಗಿ ಇಲನ.25 ರಂದು ರಾತ್ರಿ ಎಳೆಯುವ ಪಂಚಮಿ ರಥ ಹಾಗೂ ನ.26 ರಂದು ಬೆಳಗ್ಗೆ ಎಳೆಯುವ ಬ್ರಹ್ಮರಥ
ಗಳಿಗೆ ಜೋಡಿಸುವ ಶಿಖರ( ಕಳಶ)ದ ಪೂಜೆಯನ್ನು ಇಂದು ಶ್ರೀ ದೇವಳದ ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲುರಾಯರು ಕಲಶ ಪೂಜೆ ನೆರವೇರಿಸಿದರು.

ತದನಂತರ ಮಲೆ ಕುಡಿಯ ಜನಾಂಗದ ಗುರಿಕಾರ ಚಂದ್ರಶೇಖರ್ ಅವರಿಗೆ ಕಲಶ ಜೋಡಿಸಲು ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಮಲೆಕುಡಿಯ ಜನಾಂಗದ ಮುಖಂಡ ಜಗದೀಶ ಹಾಜರಿದ್ದರು.


ಕಲಶ ಪೂಜೆ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಇಂಜಾಡಿ, ಸದಸ್ಯರುಗಳಾದ ಅಶೋಕ ನೆಕ್ರಾಜೆ,ಅಜಿತ್ ಪಾಲೇರಿ,

ಮಹೇಶ್ ಕುಮಾರ್ ಕರಿಕಳ,ಲೀಲಾ ಮನೋಮೋಹನ್,ಪ್ರವೀಣ ರೈ ಮರ್ವಂಜ, ಸೌಮ್ಯ ಭರತ್, ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ, ಸಹಾಯಕ ಕಾರ್ಯನಿರ್ವಣ ಅಧಿಕಾರಿ ಯೇಸುರಾಜ್ ಮತ್ತಿತರರು ಉಪಸ್ಥಿತರಿದ್ದರು.