ಬೆಳ್ಳಾರೆ ಕೆ.ಪಿ.ಎಸ್. ಪ್ರಾಥಮಿಕ ವಿಭಾಗದಲ್ಲಿ ಕಥೆ ಕಟ್ಟೆ – ಕಥೆ ಕಟ್ಟೋಣ ಬನ್ನಿ ವಿಶೇಷ ಕಾರ್ಯಕ್ರಮ
ಉತ್ಸಾಹ ದಿಂದ ಕಥೆ ಕಟ್ಟಿ ಸಂತೋಷ ಪಟ್ಟವಿದ್ಯಾರ್ಥಿಗಳು















ಕರ್ನಾಟಕ ಸರ್ಕಾರ ಗ್ರಾಮೀಣ ನಾಭಿ ವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಬೆಳ್ಳಾರೆ, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರ ಬೆಳ್ಳಾರೆ ಆಶ್ರಯದಲ್ಲಿ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಾಥಮಿಕ ವಿಭಾಗದ ಸಹಕಾರದೊಂದಿಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2025 ಅಂಗವಾಗಿ ಕಥೆ ಕಟ್ಟೆ – ಕಥೆ ಕಟ್ಟೋಣ ಬನ್ನಿ – ಶಾಲಾ ಗ್ರಂಥಾಲಯದಲ್ಲಿ ಒಂದು ದಿನ ಎಂಬ ಕಾರ್ಯಕ್ರಮ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರಾಥಮಿಕ ವಿಭಾಗದಲ್ಲಿ ನ. 24ರಂದು ನಡೆಯಿತು. ಬರಹಗಾರರು, ಸುಳ್ಯ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ರೂ ಆದ ಶ್ರೀಮತಿ ಅಶ್ವಿನಿ ಕೋಡಿಬೈಲು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲಾ ಎಸ್. ಡಿ. ಎಂ. ಸಿ ಕಾರ್ಯಧ್ಯಕ್ಷ ಹರ್ಷ ಭಟ್ ಜೋಗಿಬೆಟ್ಟು ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ಮಾಯಿಲಪ್ಪ ಜಿ ಪ್ರಾಸ್ತಾವಿಸಿ ಮಾತುಗಳೊಂದಿಗೆ ಸ್ವಾಗತಿಸಿದರು. ಗ್ರಂಥಾಪಾಲಕಿ ಶಶಿಕಲಾ ವಂದಿಸಿದರು, ಸಹ ಶಿಕ್ಷಕಿ ಸವಿತಾ ಗುಜರನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಮಹತಿ ಎ ರಾವ್ ಪ್ರಾರ್ಥಿಸಿದರು.










