ತಮ್ಮ ಆರೋಗ್ಯ ರಕ್ಷಣೆಗೆ ಇನ್ನೊಬ್ಬರ ಜೀವ ರಕ್ಷಣೆಗೆ ರಕ್ತದಾನ ಬಹಳ ಮುಖ್ಯ ಪಾತ್ರ : ಪಿ ಬಿ ಸುಧಾಕರ್ ರೈ
ಈ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಸುಳ್ಯ ತಾಲೂಕು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು ಇದರ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ನವಂಬರ್ 25ರಂದು ಸುಳ್ಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಜನಜಾಗೃತಿ ವೇದಿಕೆಯ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಎನ್. ಎ. ರಾಮಚಂದ್ರ ರವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸುಳ್ಯ ತಾಲೂಕು ಸಮಿತಿ ಸಭಾಪತಿ ಪಿ ಬಿ ಸುಧಾಕರ್ ರವರು ವಹಿಸಿ ಮಾತನಾಡಿ ರಕ್ತದಾನ ಮಾಡುವವರ ಆರೋಗ್ಯ ರಕ್ಷಣೆಗೆ ರಕ್ತದಾನ ಸಹಕಾರಿಯದರೆ ತುರ್ತು ಸಂದರ್ಭದಲ್ಲಿ ಅದನ್ನು ಪಡೆದ ಜೀವವು ಕೂಡ ರಕ್ಷಣೆ ಯಾಗುತ್ತದೆ. ಆದ್ದರಿಂದ ಈ ಎರಡು ಕಾರ್ಯಕ್ಕೆ ರಕ್ತದಾನವು ಬಹಳ ಮಹತ್ತರ ಪಾತ್ರ ವಹಿಸುತ್ತದೆ. ರಕ್ತದಾನ ಮಾಡಲು ಯಾರೂ ಕೂಡ ಹಿಂಜರಿಯಬೇಡಿ. ಇದರಿಂದ ಯಾವುದೇ ನಷ್ಟ ಉಂಟಾಗುವುದಿಲ್ಲ. ಅಲ್ಲದೆ ರಕ್ತದಾನ ಪಡೆಯುವಾಗ ನಿಮ್ಮ ಆರೋಗ್ಯ ತಪಾಸಣೆ ಪಡೆದ ಬಳಿಕವೇ ರಕ್ತವನ್ನು ಶೇಖರಿಸಲಾಗುತ್ತದೆ. ಆದ್ದರಿಂದ ಯಾರೂ ಕೂಡ ಭಯಪಡುವ ಅವಶ್ಯಕತೆ ಇರುವುದಿಲ್ಲ ಎಂದು ಅವರು ಹೇಳಿದರು.

ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಸಾವಿರಾರು ರೋಗಿಗಳಿಗೆ ಉಚಿತವಾಗಿ ರಕ್ತದಾನ ಮಾಡುವ ಕೆಲಸ ಕಾರ್ಯಗಳು ನಡೆಯುತ್ತಿದ್ದು ಇದು ಸಂಸ್ಥೆಯ ಮಹತ್ತರವಾದ ಸೇವೆ ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತಿ ಬಿದ್ದ ಭಾರತೀಯ ವೆಹಿಕ ಸಂಸ್ಥೆಯ ಜಿಲ್ಲಾ ಪ್ರತಿನಿಧಿ ಗಣೇಶ್ ಭಟ್, ಜನಜಾಗೃತಿ ವೇದಿಕೆಯ ತಾಲೂಕು ಸಮಿತಿ ಅಧ್ಯಕ್ಷರಾದ ಲೋಕನಾಥ ಅಮೆಚೂರು, ಸುಳ್ಯ ವಲಯದ ಅಧ್ಯಕ್ಷರಾದ ನ್ಯಾಯವಾದಿ ವೆಂಕಪ್ಪಗೌಡ ರವರು ಈ ಸಂದರ್ಭದಲ್ಲಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣಿಮರಡ್ಕ, ತಾಲೂಕಿನ ಯೋಜನಾಧಿಕಾರಿ ಮಾಧವ ಗೌಡ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬೆಳ್ಳಾರೆಯ ಕೋಶಾಧಿಕಾರಿಯದ ವಿನಯ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.















ಮಂಗಳೂರು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶ್ರೀಮತಿ ಮರಿಯ ಆರತಿ, ಡಾ. ಗಣೇಶ್, ಹಾಗೂ ಸಂಸ್ಥೆಯ ಸದಸ್ಯರುಗಳಾದ ಸ್ಯಾನ್ ರಕ್ಷಿತ್, ಪ್ರತಿಕ್ಷಾ,ಚಂಪಿಕಾ, ಚೈತ್ರ ಪ್ರಮೀಳಾ ಮೊದಲಾದವರು ರಕ್ತದಾನದಲ್ಲಿ ಸಹಕರಿಸಿದರು.
ಜನಜಾಗೃತಿ ವೇದಿಕೆಯ ತಾಲೂಕಿನ ಎಲ್ಲಾ ಸದಸ್ಯರುಗಳು ಒಕ್ಕೂಟದ ಅಧ್ಯಕ್ಷರುಗಳು ಹಾಗೂ ವಿವಿಧ ಸಂಘಗಳ ಸದಸ್ಯರುಗಳು ರಕ್ತದಾನದಲ್ಲಿ ಪಾಲ್ಗೊಂಡರು.
ಯೋಜನಾಧಿಕಾರಿ ಮಾಧವ ಗೌಡ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಸುಳ್ಯ ವಲಯ ಮೇಲ್ವಿಚಾರಕರಾದ ದಿನೇಶ್ ಡಿ ಕಾರ್ಯಕ್ರಮ ನಿರೂಪಿಸಿ ಅಜ್ಜಾವರ ವಲಯದ ಮೇಲ್ವಿಚಾರಕ್ಕೆ ಶ್ರೀಮತಿ ಅನಿತಾ ವಂದಿಸಿದರು.










