ನಾಳೆ (ನ.26) ದಿನ ಪ್ರಾತಃ ಕಾಲ 7.29 ರ ವೃಶ್ಚಿಕ ಲಗ್ನದಲ್ಲಿ ಬ್ರಹ್ಮರಥೋತ್ಸವ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ವಾರ್ಷಿಕ ಚಂಪಾ ಷಷ್ಠಿ ಜಾತ್ರೋತ್ಸವದ ಅಂಗವಾಗಿ ಇಂದು ರಾತ್ರಿ ಪಂಚಮಿ ರಥೋತ್ಸವ ಹಾಗೂ ತೈಲಾಭ್ಯಂಜನ ನಡೆಯಲಿರುವುದು. ಇಂದು ರಾತ್ರಿ ಶ್ರೀ ದೇವಳದಲ್ಲಿ ಮಹಾಪೂಜೆ ನಂತರ ಅಂಗಣದಲ್ಲಿ ಬಂಡಿ ಉತ್ಸವ ನಡೆದು ನಂತರ ಪಲ್ಲಕ್ಕಿಯಲ್ಲಿ ರಥ ಬೀದಿಗೆ ಬಂದು ಪಂಚಮಿ ರಥದಲ್ಲಿ ವಿರಾಜಮಾನರಾಗಿ ರಥೋತ್ಸವ ನಡೆಯುತ್ತದೆ.
















ಜಗ ಮಗಿಸುವ ವಿದ್ಯುತ್ ದೀಪದ ಅಲಂಕಾರದೊಂದಿಗೆ ತಳಿರು ತೋರಣ, ಸಿಯಾಳ ಅಡಿಕೆ ಮುಂತಾದ ಫಲ ವಸ್ತುಗಳಿಂದ ಸಿಂಗಾರಗೊಂಡ ರಥದಲ್ಲಿ ರಥಬೀದಿಯ ಮುಖ್ಯರಸ್ತೆಯಲ್ಲಿ ಕಾಶಿ ಕಟ್ಟೆ ವರೆಗೆ ಬಂದು ನಂತರ ಸವಾರಿಮಂಟಪದಲ್ಲಿ ಕಟ್ಟೆ ಪೂಜೆ ನೆರವೇರಲಿ
ರುವುದು . ಬಳಿಕ ತೈಲಾಭ್ಯಂಜನ ನೆರವೇರಲಿರುವುದು.
ನಾಳೆ (ನ.26)ರ ದಿನ ಪ್ರಾತಃ ಕಾಲ 7.29 ರ ವೃಶ್ಚಿಕ ಲಗ್ನದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಟಿ ಬ್ರಹ್ಮರಥೋತ್ಸವ ಜರುಗಲಿರುವುದು.










