














ಕೇನ್ಯ ಗ್ರಾಮದ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಮಾ. 6- 2026ರಿಂದ 8ರ ತನಕ ನಡೆಯಲಿರುವ ಪ್ರತಿಷ್ಠೆ ಮತ್ತು ನೇಮೋತ್ಸವದ ಕುರಿತು
ಪ್ರಥಮ ಪೂರ್ವಬಾವಿ ಸಭೆ ನ. 24ರಂದು ನಡೆಯಿತು. ಜೀರ್ಣೋಧ್ಧಾರ ಸಮಿತಿ ಗೌರವ ಸಲಹೆಗಾರದ ಪದ್ಮನಾಭ ರೈ ಅಗೋಳಿಬೈಲು, ಅಧ್ಯಕ್ಷ
ಸುಬ್ರಹ್ಮಣ್ಯ ಕುಳ, ಉಪಾಧ್ಯಕ್ಷರುಗಳಾದ ಪ್ರವೀಣ್ ಕಾರ್ಜ, ಸಮಿತಿ ಪದಾಧಿಕಾರಿಗಳಾದ ವಿನೋದ್ ಬೊಳ್ಮಲೆ, ಶ್ರೀಬಾಲಕೃಷ್ಣ ರೈ ಬಿರ್ಕಿ, ಕಾರ್ಯದರ್ಶಿ ಪ್ರಸಾದ್ ನರಿಯಂಗ, ಕೋಶಾಧಿಕಾರಿ ಅರುಣ್ ರೈ ಗೆಜ್ಜೆಯವರ ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂಧರ್ಭದಲ್ಲಿ ಆಡಳಿತ ಮತ್ತು ಜೀರ್ಣೋಧ್ಧಾರ ಸಮಿತಿಯ ಪಧಾಧಿಕಾರಿಗಳು ಸದಸ್ಯರು ಭಕ್ತಾದಿಗಳು
ಉಪಸ್ಥಿತರಿದ್ದರು. ಮನೋಹರ.
ಕೆ. ಕಾಂಜಿ ಸ್ವಾಗತಿಸಿ, ಮೋಹನ್ ಕೆ. ವಂದಿಸಿದರು.










