ಬೆಳ್ಳಾರೆ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2025

0

ಓದಿನ ಏಕಾಗ್ರತೆಗೆ ಯೋಗ ಅಗತ್ಯ : ಗಣಪಯ್ಯ ವನಶ್ರೀ

ಯೋಗ ಜಾಗತಿಕ ವಿದ್ಯೆ, ಶರೀರ ಮತ್ತು ಮನಸ್ಸಿನ ಸದೃಢತೆಗೆ ಯೋಗ ಅವಶ್ಯಕ. ಓದಿನಲ್ಲಿ ಏಕಾಗ್ರತೆ ಬರಬೇಕಾದರೆ ಯೋಗ ಬೇಕು ಎಂದು ಯೋಗ ಶಿಕ್ಷಕ ಗಣಪಯ್ಯ ವನಶ್ರೀ ಹೇಳಿದರು.

ಅವರು
ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಬೆಳ್ಳಾರೆ, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರ ಬೆಳ್ಳಾರೆ ಆಶ್ರಯದಲ್ಲಿ ಜ್ಞಾನದೀಪ ಶಿಕ್ಷಣ ಸಂಸ್ಥೆ ಬೆಳ್ಳಾರೆ ಇವರ ಸಹಕಾರದೊಂದಿಗೆ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2025ರ ಓದು, ಯೋಗ ಮತ್ತು ಏಕಾಗ್ರತೆ ಎಂಬ ವಿಷಯದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯೆ ಜಯಶ್ರೀ, ಜ್ಞಾನದೀಪ ಶಿಕ್ಷಣ ಸಂಸ್ಥೆ ನಿರ್ದೇಶಕ ಉಮೇಶ್ ಮಣಿಕ್ಕಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿ ತೇಜಸ್ವಿನಿ ಸ್ವಾಗತಿಸಿದರು. ಗ್ರಂಥಾಪಾಲಕಿ ಶಶಿಕಲಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿ ರಚನಾ ಪ್ರಾರ್ಥಿಸಿದರು.