ಚೊಕ್ಕಾಡಿ ಸತ್ಯಸಾಯಿ ವಿದ್ಯಾ ಕೇಂದ್ರಕ್ಕೆ ಸಮಗ್ರ ಪ್ರಥಮ ಪ್ರಶಸ್ತಿ

ಗುತ್ತಿಗಾರು ವಲಯ ಮಟ್ಟದ ಪ್ರತಿಭಾ ಕಾರಂಜಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ನ. 25 ರಂದು ನಡೆಯಿತು.
ಶಾಲೆಯ ಆಡಳಿತ ಮಂಡಳಿಯ ಸಂಚಾಲಕರಾದ ರಾಧಾಕೃಷ್ಣ ಬೊಳ್ಳೂರು ರವರು ಮಾತನಾಡಿ “ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸಲು ಪ್ರತಿಭಾ ಕಾರಂಜಿಯಂತಹ ವೇದಿಕೆಯ ಮೂಲಕ ಅನಾವರಣಗೊಳ್ಳಲು ಪೂರಕವಾಗುವುದ ಎಂದು ಹೇಳಿದರು.















ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಮೂಕಮಲೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಮರಮೂಡ್ನೂರು ಪಂಚಾಯತ್ ಸದಸ್ಯ ಕೃಷ್ಣಪ್ರಸಾದ ಮಾಡಬಾಕಿಲು,
ಆಡಳಿತ ಮಂಡಳಿ ಉಪಾಧ್ಯಕ್ಷ ಅಣ್ಣಾಜಿ ಗೌಡ, ಕಾರ್ಯದರ್ಶಿ ತೇಜಸ್ವಿ ಕಡಪಳ, ಖಜಾಂಜಿ ಹರ್ಷವರ್ಧನ ಬೊಳ್ಳೂರು, ನಿರ್ದೇಶಕ ಸತ್ಯಪ್ರಸಾದ ಪಿ, ಗುತ್ತಿಗಾರು ವಲಯ ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ, ದೇವಚಳ್ಳ ವಲಯ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಭಾಕರ, ಚೊಕ್ಕಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಂಕೀರ್ಣ ಚೊಕ್ಕಾಡಿ, ಆಂಗ್ಲ ಮಾಧ್ಯಮಮುಖ್ಯ ಶಿಕ್ಷಕಿ ಭವ್ಯಾ ಉಪಸ್ಥಿತರಿದ್ದರು. ಸಂಕೀರ್ಣ ಚೊಕ್ಕಾಡಿ ಸ್ವಾಗತಿಸಿ, ಸಂಪನ್ಮೂಲ ವ್ಯಕ್ತಿ ಸುಂದರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಹಶಿಕ್ಷಕಿ ಜಯಶ್ರೀ ವಂದಿಸಿದರು. ಸಹಶಿಕ್ಷಕ ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಾ ಕಾರಂಜಿಯಲ್ಲಿ ಭಗವಾನ್ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿ ಪ್ರೌಢಶಾಲೆ ಸಮಗ್ರ ಪ್ರಥಮ , ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಮತ್ತು ಸರಕಾರಿ ಪ್ರೌಢಶಾಲೆ ಎಲಿಮಲೆ ಸಮಗ್ರ ದ್ವಿತೀಯ, ಜ್ಞಾನದೀಪ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಲಿಮಲೆ ಸಮಗ್ರ ತೃತೀಯ ಪ್ರಶಸ್ತಿ ಪಡೆದುಕೊಂಡಿತು.










