ಬೆಳ್ಳಾರೆ ಸರಕಾರಿ ಆಸ್ಪತ್ರೆ ಹೋಗುವ ರಸ್ತೆ ಗ್ರಾ.ಪಂ.ವತಿಯಿಂದ ದುರಸ್ಥಿ

0

ಬೆಳ್ಳಾರೆ ಸರಕಾರಿ ಆಸ್ಪತ್ರೆ ಹೋಗುವ ರಸ್ತೆ ಹೊಂಡ,ಗುಂಡಿಗಳಿಂದ ಕೂಡಿದ್ದು ಇಂದು ಪಂಚಾಯತ್ ವತಿಯಿಂದ ದುರಸ್ಥಿ ಕಾರ್ಯ ನಡೆಯಿತು.


ಹಲವು ಸಮಯದಿಂದ ಈ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು ಕೆಸರುಮಯವಾಗಿತ್ತು.ವಾಹನ ಸವಾರರು ಕಷ್ಟ ಪಟ್ಟು ಈ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದರು.
ಇಂದು ರಸ್ತೆಗೆ ಜೆಸಿಬಿ ಮುಖಾಂತರ ಚರಲ್ ಗಳನ್ನು ಹಾಕಿ ತಾತ್ಕಾಲಿಕವಾಗಿ ದುರಸ್ಥಿಪಡಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ನಮಿತಾ ಎಲ್ ರೈ,ಪಿಡಿಒ ಪ್ರವೀಣ್ ಸಿ.ವಿ,ಗ್ರಾ.ಪಂ.ಸದಸ್ಯೆ ಶ್ರೀಮತಿ ಜಯಶ್ರೀ, ದಿಲೀಪ್ ಗಟ್ಟಿಗಾರು,ಮಾಧವ ತಡಗಜೆ, ,ಪ್ರೇಮಚಂದ್ರ ಬೆಳ್ಳಾರೆ ಉಪಸ್ಥಿತರಿದ್ದರು.