
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಠಿ ಬ್ರಹ್ಮರಥೋತ್ಸವದ ದಿನದಂದು 231 ಭಕ್ತಾದಿಗಳು ಅಂಗಣದಲ್ಲಿ ಎಡೆ ಸ್ನಾನ ಸೇವೆಯನ್ನು ಸಲ್ಲಿಸಿದರು.
















ವಾರ್ಷಿಕ ಜಾತ್ರೆಯ ಮೂರು ದಿನಗಳಲ್ಲಿ ನಡೆಯುವ ಸ್ಥಾನದಲ್ಲಿ ಸುಮಾರು 600ಕ್ಕೂ ಮಿಕ್ಕಿ ಹರಕೆ ಹೊತ್ತು ಭಕ್ತಾದಿಗಳು ಎಡೆಸ್ನಾನ ಸೇವೆ ಸಲ್ಲಿಸಿದರು. ಮಧ್ಯಾಹ್ನ ಶ್ರೀ ದೇವರಿಗೆ ಅರ್ಪಿಸಿದ ನೈವೇದ್ಯವನ್ನು ದೇವಳದ ಅಂಗಣದ ಸುತ್ತಲು ಹಾಕಿದ ಬಾಳೆ ಎಲೆಯಲ್ಲಿ ಬಡಿಸಿ ಅದನ್ನು ಗೋವುಗಳಿಂದ ತಿನ್ನಿಸಿ ಹರಕೆ ಹೊತ್ತ ಭಕ್ತಾದಿಗಳು ಅಂಗಣದ ಸುತ್ತಲೂ ಉರುಳು ಸೇವೆಯನ್ನು ಮಾಡಿ ಸಲ್ಲಿಸುವ ಸೇವೆಯೇ ಎಡೆ ಸ್ನಾನ ಸೇವೆ. ಈ ಸಂದರ್ಭದಲ್ಲಿ ರಾಜ್ಯ ಆಗಮ ಶಾಸ್ತ್ರ ಪಂಡಿತರು, ಶ್ರೀ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳು, ಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿ ವರ್ಗದವರು, ಭದ್ರತಾ ಸಿಬ್ಬಂದಿಗಳು ಹಾಜರಿದ್ದರು.










