ನಾಲ್ಕೂರಿನ ನವಶಕ್ತಿ ಮಕ್ಕಳ ಕುಣಿತ ಭಜನೆ ತಂಡದಿಂದ ರಾಮನಾಥಪುರದಲ್ಲಿ ಕುಣಿತ ಭಜನೆ

0

ಹಾಸನ ಜಿಲ್ಲೆಯ ರಾಮನಾಥಪುರದಲ್ಲಿರುವ ಕುಕ್ಕೆ ಶ್ರೀ ಸುಬ್ರಮಣ್ಯ ಮಠದ ಆಡಳಿತಕ್ಕೊಳಪಟ್ಟ ಶ್ರೀ ಪ್ರಸನ್ನನಾಥ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಟಿಯ ಪ್ರಯುಕ್ತ ಶ್ರೀ ದೇವರಿಗೆ ರಥೋತ್ಸವ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಅಲ್ಲಿನ ಉತ್ಸವದಲ್ಲಿ ನಾಲ್ಕೂರು ಗ್ರಾಮದ ಹಾಲೆಮಜಲಿನ ನವಶಕ್ತಿ ಮಕ್ಕಳ ಕುಣಿತ ಭಜನೆ ತಂಡ ದೇವರ ರಥೋತ್ಸವ ಸಂದರ್ಭದಲ್ಲಿ ಕುಣಿತ ಭಜನೆ ನಡೆಸಿದರು.


ಈ ಸಂದರ್ಭದಲ್ಲಿ ಮಠದ ದಿವಾನರಾದ ಸುದರ್ಶನ ಜೋಯಿಸರವರು ಮಕ್ಕಳನ್ನು ಶಾಲುಹೊದಿಸಿ, ಶ್ರೀದೇವರ ಪ್ರಸಾದವನ್ನು ನೀಡಿ ಗೌರವಿಸಿದರು. ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಕುಣಿತ ಭಜನೆ ಬಹಳಷ್ಟು ಮಹತ್ವ ಪಡೆಯುತ್ತಿದ್ದು, ಆ ಭಾಗದ ಭಕ್ತಾದಿಗಳು ಮಕ್ಕಳ ಕುಣಿತ ಭಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. (ಚಿತ್ರ, ವರದಿ: ಡಿ.ಹೆಚ್.)