ಡಾ. ಹೆಗ್ಗಡೆ ಜನ್ಮದಿನದ ಪ್ರಯುಕ್ತ ತೊಡಿಕಾನದಲ್ಲಿ ವಿಶೇಷ ಪ್ರಾರ್ಥನೆ

0

ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ನ. 25ರಂದು ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾಜು೯ನ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಪಾಜೆ ವಲಯ, ತೊಡಿಕಾನ ಒಕ್ಕೂಟದ ವತಿಯಿಂದ ಸರ್ವ ಸೇವೆ ಪೂಜೆ ಸಲ್ಲಿಸಲಾಯಿತು.


ಜೊತೆಗೆ ಶಿವಶಂಕರಿ ಮಹಿಳಾ ಭಜನಾ ಸಂಘ ಹಾಗೂ ಶ್ರೀಮಲ್ಲಿಕಾರ್ಜುನ ಭಜನಾ ಸಂಘದವರಿಂದ ಭಜನಾ ಸೇವೆ ಹಾಗೂ ಶ್ರೀದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು . ಈ ಸಂದರ್ಭದಲ್ಲಿ ಭಜನಾ ಸಂಘಗಳ ಪದಾದಿಕಾರಿಗಳು, ವಲಯ ಅಧ್ಯಕ್ಷರು, ಒಕ್ಕೂಟದ ಅಧ್ಯಕ್ಷರು, ವ್ಯವಸ್ಥಾಪಾನಾ ಸಮಿತಿಯವರು, ತೊಡಿಕಾನ ಶಾಲಾ ಮುಖ್ಯೋಪದ್ಯಾಯರು, ಎಸ್ ಡಿ ಎಮ್ ಸಿ ಅಧ್ಯಕ್ಷರು, ತೊಡಿಕಾನ ಅಂಚೆ ಪಾಲಕರು, ವಿ ಎಲ್ ಇ, ಹಾಗೂ ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು.