
ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನವನ್ನು ನ. 27 ರಂದು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ. ಟೀನಾ ಎಚ್.ಎಸ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಕಾಲೇಜಿನ ಉಪನ್ಯಾಸಕಿ ಸುಚಿತ್ರ ಜೆ, ಸಾಂವಿಧಾನಿಕ ನೈತಿಕತೆಯ (Constitutional Morality) ಪರಿಕಲ್ಪನೆ, ಅದರ ಐತಿಹಾಸಿಕ ಬೇರುಗಳು, ಭಾರತೀಯ ನ್ಯಾಯಶಾಸ್ತ್ರದಲ್ಲಿ ಅದರ ವಿಕಾಸ, ಮತ್ತು ವಿಶೇಷವಾಗಿ ಧರ್ಮದ ಮೂಲಭೂತ ಹಕ್ಕಿಗೆ ಸಂಬಂಧಿಸಿದಂತೆ ಸಾಂವಿಧಾನಿಕ ನೈತಿಕತೆಯು ಹೇಗೆ ಅನ್ವಯಿಸುತ್ತದೆ ಎಂಬುದನ್ನು ವಿಶ್ಲೇಷಿಸಿದರು.
















ಗೌರವ ಉಪಸ್ಥಿತರಿದ್ದ ಕಾಲೇಜಿನ ಆಡಳಿತಧಿಕಾರಿ ಪ್ರೊ. ಕೆ.ವಿ ದಾಮೋದರ ಗೌಡ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಉಪನ್ಯಾಸಕಿ ಶ್ರೀಮತಿ ನಯನ ಪಿ.ಯು. ಸಂವಿಧಾನ ಪೀಠಿಕೆಯ ವಚನ ವಾಚಿಸಿದರು. ವಿದ್ಯಾರ್ಥಿನಿ ಜಯಂತಿ ಡಯಾಸ್ ಪ್ರಾರ್ಥಿಸಿ, ಕಾಲೇಜಿನ ಕಾನೂನು ನೆರವು ಘಟಕದ ಕಾರ್ಯಕ್ರಮ ಸಂಯೋಜಕಿ ಉಪನ್ಯಾಸಕಿ, ವಿದ್ಯಾರ್ಥಿನಿ ಕು. ಪ್ರಲೋಕ್ಷಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ರಚನ ಕೆ. ವಂದಿಸಿದರು.










