ಕೇರ್ಪಡ: ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

0

ಶ್ರೀ ಮಹಿಷ ಮರ್ದಿನೀ ದೇವಸ್ಥಾನದಲ್ಲಿ ಡಿ.14 ಮತ್ತು 15 ರಂದು ಕ್ಷೇತ್ರದ ತಂತ್ರಿ ಗಳಾದ ಕೆಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ವರ್ಷವಾದಿ ಜಾತ್ರೋತ್ಸವ ನಡೆಯಲಿರುವುದು. ಆ ಪ್ರಯುಕ್ತ ನ.23ರಂದು ದೇವಳದ ಪ್ರದಾನ ಅರ್ಚಕರಾದ ಶ್ರೀ ಹರಿ ಕುಂಜೂರಾಯರ ವೈಧಿಕ ಕಾರ್ಯಕ್ರಮ ಗಳೊಂದಿಗೆ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಲಾಯಿತು ಹಾಗೂ ಬೈಲುವಾರು ಸಮಿತಿ ಗಳಿಗೆ ಆಮಂತ್ರಣ ಪತ್ರಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎನ್ ಜಿ ಲೋಕನಾಥ ರೈ ಪಟ್ಟೆ ಎಣ್ಮೂರು, ಸದಸ್ಯರಾದ ವೇಣುಗೋಪಾಲ ರೈ, ವಾಚಣ್ಣ ಗೌಡ ಹುದೇರಿ, ಶ್ರೀಮತಿ ಗುಣವತಿ ನಾವೂರು, ಬಿಜಿಲ ಅಲೆಕ್ಕಾಡಿ ಶ್ರೀಮತಿ ಕಸ್ತೂರಿ ಮೊಂಟಾಪಾದೆ, ಭಜನಾ ಮಂಡಳಿ ಅಧ್ಯಕ್ಷರು ಸುಂದರ ಗೌಡ ಆರೆಂಬಿ, ಭಜನಾ ಮಂಡಳಿ ಸದಸ್ಯರು ಹಾಗೂ ನಿವೃತ ಶಿಕ್ಷಕ ನಾರಾಯಣ ಭಟ್, ಮಂಜುನಾಥ ರೈ ಗುತ್ತು, ಕರುಣಾಕರ ಗೌಡ ಕರಿಂಬಿಲ, ಸುಗಂಧಿ ಮಾಧವ ಕೇರ್ಪಡ, ಬೈಲುವಾರು ಸಮಿತಿಯವರು ಕೇರ್ಪಡ ಕೂಡುಕಟ್ಟು, ಇನ್ನಿತರರು ಉಪಸ್ಥಿತರಿದ್ದರು.
ವರದಿ:ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ