ಜೀವನ್ ಕುತ್ಪಾಜೆಯವರಿಗೆ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್

0

ಮಂಗಳೂರಿನ ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಬಿಬಿಎ ವಿಭಾಗದಲ್ಲಿ ಜೀವನ್ ಕುತ್ಪಾಜೆಯವರು ಅತಿ ಹೆಚ್ಚು ಅಂಕಗಳನ್ನು ಪಡೆದು ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್ ಪಡೆದಿದ್ದಾರೆ. ಇವರು ಸುಳ್ಯ ಕಾಯರ್ತ್ತೋಡಿಯ ನಿವಾಸಿ ಕುತ್ಪಾಜೆ ಹಿಮಕರ ಕೆ.ಎಸ್ ಮತ್ತು ಲಾವಣ್ಯ ದಂಪತಿಗಳ ಪುತ್ರ.

ಇವರು ಎಸ್‌ಎಸ್‌ಎಲ್‌ಸಿ ಸುಳ್ಯ ಗ್ರೀನಿವ್ಯೂನಲ್ಲಿ, ಪಿಯುಸಿ ಕೆವಿಜಿ ಅಮರಾಜ್ಯೋತಿಯಲ್ಲಿ ಹಾಗೂ ಡಿಗ್ರಿ ಯೆನೆಪೋಯ ಮಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಈಗ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ.