ಲಯನ್ಸ್ ಕ್ಲಬ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕವಿ – ಭಾವ – ಗಾನ ಕಾರ್ಯಕ್ರಮ

0

ಸುಳ್ಯ ಲಯನ್ಸ್‌ ಕ್ಲಬ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕವಿ – ಭಾವ – ಗಾನ ಕಾರ್ಯಕ್ರಮ ನ.26ರಂದು ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.

ಸುಳ್ಯ‌ ಲಯನ್ಸ್ ಕ್ಲಬ್ ಅಧ್ಯಕ್ಷ ‌ದೀಪಕ್ ಕುತ್ತಮೊಟ್ಟೆ ಯವರ ಅಧ್ಯಕ್ಷತೆಯಲ್ಲಿ ‌ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ, ಗಾಯಕ ಕೆ.ಆರ್.ಗೋಪಾಲಕೃಷ್ಣ ರವರು ಭಾಗವಹಿಸಿದ್ದರು.

ಲಯನ್ಸ್ ಪ್ರಾಂತೀಯ ರಾಯಬಾರಿ ಜಯರಾಮ ದೇರಪ್ಪಜ್ಜನಮನೆ, ವಲಯ 2ರ ವಲಯಾಧ್ಯಕ್ಷ ಚಂದ್ರಶೇಖರ ನಂಜೆ, ಪಿಡಿಜಿ ಎಂ.ಬಿ.ಸದಾಶಿವ, ಲಯನ್ಸ್ ಮಾಜಿ ಅಧ್ಯಕ್ಷ ರಾಮಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ‌ಮಲ್ಲಿಕಾರ್ಜುನ ಪ್ರಸಾದ್, ಕೋಶಾಧಿಕಾರಿ ಜತ್ತಪ್ಪ ರೈ ಇದ್ದರು. ಸಭಾ ಕಾರ್ಯಕ್ರಮದ ಬಳಿಕ ಕೆ.ಆರ್. ಗೋಪಾಲಕೃಷ್ಣ ರವರಿಂದ  ಗಾಯನ ನಡೆಯಿತು.