ದೇವರಕಾನ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಅಭಿವೃದ್ಧಿ ಕಾಮಗಾರಿ

0

ಮುರುಳ್ಯ ದೇವರಕಾನ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಅಭಿವೃದ್ಧಿ ಕಾಮಗಾರಿ ಬರದಿಂದ ಸಾಗುತ್ತಿದೆ. ಹೊರಂಗಣ ತಡೆಗೋಡೆ, ಪ್ರವೇಶ ಮಹಾದ್ವಾರ, ಮೆಟ್ಟಿಲು ರಚನೆಗೆ ಭಕ್ತಾಧಿಗಳ ದೇಣಿಗೆ 50 ಲಕ್ಷ ಅಂದಾಜು ದೇವಳದ ವತಿಯಿಂದ ನಡೆಯುತ್ತಿದೆ.

ದೇವಸ್ಥಾನಕ್ಕೆ ಅವ್ಯವಸ್ಥೆ ರಸ್ತೆಯಲ್ಲಿಯೇ ಸಾಗಬೇಕು. ಈ ರಸ್ತೆ ಮೂರು ದೇವಸ್ಥಾನಗಳು ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ, ಶ್ರೀ ಮಹಾ ವಿಷ್ಣು ಅವಳಿ ದೇವಸ್ಥಾನ, ಮತ್ತು ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನಗಳು, ಎರಡು ಹಿಂದುಳಿದ ಕಾಲನಿಗಳು, ಹಳ್ಳಿ ಪ್ರದೇಶದ ನೂರಾರು ಮನೆಗಳು ಸಾಗಬೇಕು. ಸಂಚಾರಕ್ಕೆ ಸಂಚಾಕಾರವಾಗಿರುತ್ತದೆ. ಸಂಬಂಧಪಟ್ಟವರು ಗಮನಿಸಿ ಇದಕ್ಕೆ ಸೂಕ್ತ ವ್ಯವಸ್ಥೆಯ ರಸ್ತೆ ಕಲ್ಪಿಸಬೇಕು.