ಪತ್ರಿಕಾಗೋಷ್ಠಿ ಬೆನ್ನಲ್ಲೇ ಜಯನಗರದಲ್ಲಿ ಗುದ್ದಲಿ ಪೂಜೆ ಮಾಡಿದ್ದ ರಸ್ತೆ ಕಾಮಗಾರಿ ಆರಂಭ

0

ಉಳಿದ ಭಾಗಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ ಕೊಡಲಿ : ಸಾರ್ವಜನಿಕರ ಆಗ್ರಹ

ಜಯನಗರ ರಸ್ತೆಯ ಅವ್ಯವಸ್ಥೆಯ ಬಗ್ಗೆ ಸ್ಥಳೀಯ ನಿವಾಸಿಗಳು ಪ್ರತಿಭಟನೆ, ಮನವಿ ಮಾಡುವುದು ಮುಂತಾದ ರೀತಿಯಲ್ಲಿ ಆಗ್ರಹಗಳನ್ನು ಮಂಡಿಸಿ ಕೊನೆಗೆ ಈ ಬಗ್ಗೆ ಪತ್ರಿಕಾಗೋಷ್ಠಿಯನ್ನು ನಡೆಸಿ ನ.28 ರಂದು ರಸ್ತೆ ದುರಸ್ತಿಗಾಗಿ ಆಗ್ರಹ ವ್ಯಕ್ತಪಡಿಸಿದ್ದರು.

ಇದೀಗ ಪತ್ರಿಕಾಗೋಷ್ಠಿಗೆ ಸ್ಪಂದಿಸಿರುವ ಸಂಬಂಧಪಟ್ಟ ಇಲಾಖೆಯವರು ಒಂದುವರೆ ತಿಂಗಳ ಹಿಂದೆ ಮಾಡಿದ್ದ ಗುದ್ದಲಿ ಪೂಜೆಯ ಕಾಮಗಾರಿಯನ್ನು ನ.29 ರಂದು ಆರಂಭಿಸಿದ್ದು, ಈ ಭಾಗದ ಸಾರ್ವಜನಿಕರಲ್ಲಿ ಅಲ್ಪ ಮಟ್ಟಿಗೆ ಸಮಾಧಾನ ವ್ಯಕ್ತವಾಗಿದೆ. ಅಪರ್ಣ ಇಂಡಸ್ಟ್ರೀಸ್ ಬಳಿಯಿಂದ ಸುಮಾರು 120 ಮೀಟರ್ ರಸ್ತೆ ಕಾಂಕ್ರೀಟೀಕರಣಕ್ಕೆ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಉಳಿದಂತೆ ಜಯನಗರ ನಿಸರ್ಗ ಇಂಡಸ್ಟ್ರೀಸ್ ನ ಕೆಳಭಾಗದಲ್ಲಿ ಬರುವ ರಸ್ತೆ ಮತ್ತು ಅದೇ ರೀತಿ ಜಯನಗರ ಶಾಲೆಯ ಬಳಿಯಲ್ಲಿಯೂ ಕೂಡ ರಸ್ತೆ ಹೊಂಡ ಗುಂಡಿಗಳಿಂದ ತುಂಬಿದ್ದು ಅವ್ಯವಸ್ಥೆಯಿಂದ ಕೂಡಿದೆ. ಇದೇ ಕಾಮಗಾರಿಯಲ್ಲಿ ಉಳಿದ ಭಾಗಗಳಲ್ಲಿಯೂ ಕೂಡ ಪ್ಯಾಚ್ ವರ್ಕ್ ಮಾಡಿಕೊಡುವ ಮೂಲಕ ಜಯನಗರ ನಿವಾಸಿಗಳ ಬಹು ಬೇಡಿಕೆಯ ಸಮಸ್ಯೆಗೆ ಪರಿಹಾರ ನೀಡಲಿ ಎಂದು ಈ ಭಾಗದ ಸಾರ್ವಜನಿಕರು ಆಗ್ರಹಿಸಿದ್ದಾರೆ.