ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ಸದಸ್ಯತನ ಹೊಂದಿದ್ದು ಇತ್ತೀಚೆಗೆ ಮರಣ ಹೊಂದಿದ ಕಮಲ ದೇವರುಳಿಯ ಮನೆಯವರಿಗೆ ಮರಣ ಸಾಂತ್ವನ ನಿಧಿಯನ್ನು ನ.28 ವಿತರಿಸಲಾಯಿತು.
















ನಾಮಿನಿ ಪುಂಡರೀಕ ಅವರಿಗೆ ₹15000 ದ ಚೆಕ್ ಹಸ್ತಾಂತರಿಸಲಾಗಿದ್ದು ಈ ಸಂದರ್ಭ ಸಂಘದ ಅಧ್ಯಕ್ಷ ಡಾ. ಸೋಮಶೇಖರ ಕಟ್ಟೆಮನೆ, ಉಪಾಧ್ಯಕ್ಷ ಗಣೇಶ್ ಭಟ್ ಇಡ್ಯಡ್ಕ, ಕಾರ್ಯನಿರ್ವಹಣಾಧಿಕಾರಿ ಬೆಳ್ಯಪ್ಪ ಗೌಡ, ಸೊಸೈಟಿಯ ನಿರ್ದೇಶಕರು ಉಪಸ್ಥಿತರಿದ್ದರು.










