ಮುಗೇರು – ಮಾಣಿಮಜಲು ಶಾಲಾ ವಾರ್ಷಿಕೋತ್ಸವ

0

ಸರಕಾರಿ ಶಾಲೆಯನ್ನು ಉಳಿಸುವ ಕಾರ್ಯ ನಮ್ಮ ಜವಾಬ್ದಾರಿ : ಶಾಸಕಿ ಭಾಗೀರಥಿ ಮುರುಳ್ಯ

ಸಾಂಸ್ಕೃತಿಕ ವೈಭವ – ಸನ್ಮಾನ ಕಾರ್ಯಕ್ರಮ

ದ. ಕ . ಜಿo. ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಗೇರು _ ಮಾಣಿಮಜಲು ಕನಕಮಜಲು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಿರಿಯ ವಿವಿಧ ವಿದ್ಯಾರ್ಥಿ ಸಂಘ ಮುಗೇರು, ಮಾಣಿಮಜಲು ಇವುಗಳ ಜಂಟಿ ಆಶ್ರಯದಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನ.29 ರಂದು ನಡೆಯಿತು.

ಮಾಣಿ ಮಜಲು ಮುಗೇರು ಎಸ್.ಡಿ.ಎಂ. ಸಿ ಅಧ್ಯಕ್ಷ ದಿವಾಕರ ಕಾಳಪ್ಪಜ್ಜನ ಮನೆ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಳಿಕ ಅಂಗನವಾಡಿ ಪುಟಾಣಿ ಮಕ್ಕಳಿಂದ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮವು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಯಲ್ಲಿ ಮಕ್ಕಳು ಕಡಿಮೆಯಾಗುತ್ತಿದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸರಕಾರಿ ಶಾಲೆಯನ್ನು ಬಿಟ್ಟು ನಗರದ ಪ್ರೈವೇಟ್ ಶಾಲೆ ಕಡೆಗೆ ಹೋಗುತ್ತಿದ್ದಾರೆ. ಇದರಿಂದ ಸರಕಾರಿ ಶಾಲೆಯಲ್ಲಿ ಮಕ್ಕಳು ಕಡಿಮೆಯಾಗಿ ಶಾಲೆಯನ್ನು ಮುಚ್ಚುವಂತಹ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ನಮ್ಮ ಸರಕಾರಿ ಶಾಲೆಯನ್ನು ಬೆಳಸಿ ,ಉಳಿಸಿ, ಕನ್ನಡ ಭಾಷೆಯನ್ನು ಉಳಿಸುವಲ್ಲಿ ಪೋಷಕರು ಹಾಗೂ ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಹಾಗೂ ಕೃಷಿಕರ ಮಕ್ಕಳು ಕೃಷಿಕರಾಗಿ ಹಾಗೂ ದೊಡ್ಡವರ ಮಕ್ಕಳು ಡಾಕ್ಟರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಪೋಷಕರು ಕೂಡಾ ಸರಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಹೆಚ್ಚಾಗಿ ಸೇರ್ಪಡೆಯಾಗಿ ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಯನ್ನು ಉಳಿಸುವ ಕಾರ್ಯ ಮಾಡಬೇಕಾಗಿದೆ ಎಂದು ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನಕಮಜಲು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಶಾರದಾ ಉಗ್ಗಮೂಲೆ, ಮುಖ್ಯ ಅತಿಥಿಗಳಾಗಿ ಕನಕಮಜಲು ಗ್ರಾ.ಪಂ ಉಪಾಧ್ಯಕ್ಷ ಶ್ರೀಧರ ಕುತ್ಯಾಳ , ಗ್ರಾ.ಪಂ ಸದಸ್ಯರಾದ ದೇವಕಿ ಕುಡ್ಕುಳಿ, ಜಗನ್ನಾಥ ಬಿ.ಹೆಚ್ ಮಾಣಿಮಜಲು, ಇಬ್ರಾಹಿಂ ಖಾಸಿಂ , ಪ್ರೇಮಲತಾ ಪಂಜಿಕೋಡಿ, ಸುಮಿತ್ರಾ ಕುತ್ಯಾಳ, ಕನಕ ಮಜಲು ಪ್ರಾ. ಕೃ. ಪ. ಸ. ಸಂಘ ( ನಿ) ಜಾಲ್ಸೂರು ಅಧ್ಯಕ್ಷ ಸುಧಾಕರ ಕಾಮತ್.ಕೆ ,ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶೀತಲ್ ಯು.ಕೆ , ಸೋಣoಗೇರಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಅನುರಾಧ ಎ.ಆರ್, ಪ್ರಗತಿಪರ ಕೃಷಿಕ ದಿನೇಶ್ ರಾವ್ ಮುಗೇರು, ಸುಳ್ಯ ಎನ್.ಎಸ್.ಎಸ್ ಸೇವಾ ಸಂಘ (ರಿ) ಗೌರವಾಧ್ಯಕ್ಷ ಬಾಲಕೃಷ್ಣ ಬೊಳ್ಳೂರು, ಸುಳ್ಯ ಸರಕಾರಿ ಪ. ಪೂ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರಕಾಶ್ ಮೂಡುತ್ತಾಯ ಮುಖ್ಯ ಭಾಷಣವನ್ನು ಮಾಡಿದರು. ಶಾಲಾ ಮುಖ್ಯ ಗುರುಗಳು ಶ್ರೀಮತಿ ರತಿ, ವಿನ್ಯಾಸ ಕಣಜಾಲು, ಹರಿವಂಶ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ವೇದಿಕೆಯಲ್ಲಿ ಸ್ಥಳೀಯ ಸಾಧರನ್ನು ಗೌರವಿಸಲಾಯಿತು.

ದಿವಾಕರ ಕಾಳಪ್ಪಜ್ಜನ ಮನೆ ಸರ್ವರನ್ನು ಸ್ವಾಗತಿಸಿ ಸಹಶಿಕ್ಷಕಿ ಶ್ರೀಮತಿ ಶುಭ ಧನ್ಯವಾದಿಸಿ, ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ದಾಮೋದರ ಕಣಜಾಲು ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಹಿರಿಯ ವಿದ್ಯಾರ್ಥಿಗಳಿಂದ “ಸಾಂಸ್ಕೃತಿಕ ಕಲರವ” ಹಾಗೂ ನಾಟಕ “ಪಾಠ ಶಾಲೆ ” , ಕು. ಸಾಯಿ ಶ್ರುತಿ ಪಿಲಿಕಜೆ ಇವರಿಂದ “ಮಾತನಾಡುವ ಗೊಂಬೆ” , ಹಾಗೂ ಸಂಜೆ 5 ಗಂಟೆಯಿಂದ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಹಾಗೂ ಬಿ. ಹೆಚ್ ವೆಂಕಪ್ಪ ಗೌಡ ಬೆಳ್ಳಿಪ್ಪಾಡಿ ಹಳೆಮನೆ ನಿರ್ದೇಶನದ” ಯಕ್ಷಗಾನ ಬಯಲಾಟ ” ಐರಾಸುರ ವಧೆ , ಅತಿಥಿ ಕಲಾವಿದರ ಕೂಡುವಿಕೆಯಿಂದ ಅಗ್ರಪೂಜೆ ಮೊದಲಾದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಿತು.