ಸುಳ್ಯದ ಕೆ.ಎಸ್.ಆರ್.ಟಿ.ಸಿ ಯಲ್ಲಿ ಸಂಚಾರ ನಿಯಂತ್ರಕರಾಗಿದ್ದ ಶಾಂತಪ್ಪ ಗೌಡ ವಜ್ರಡ್ಕ ರವರು ನ.30 ರಂದು ಸೇವೆಯಿಂದ ನಿವೃತ್ತರಾದರು.















ಇವರು 1992 ರಲ್ಲಿ ಕೆ.ಎಸ್.ಆರ್.ಟಿ.ಸಿ ಧರ್ಮಸ್ಥಳ ಘಟಕಕ್ಕೆ ನಿರ್ವಾಹಕರಾಗಿ ಸೇರ್ಪಡೆಯಾದರು. ಧರ್ಮಸ್ಥಳ ಘಟಕದಲ್ಲಿ 3 ವರ್ಷ ನಿರ್ವಹಕರಾಗಿ ಸೇವೆ ಸಲ್ಲಿಸಿ ನಂತರ ಪುತ್ತೂರು ಘಟಕಕ್ಕೆ ವರ್ಗಾವಣೆಗೊಂಡರು. ಪುತ್ತೂರು ಘಟಕದಲ್ಲಿ 22 ವರ್ಷ ಕರ್ತವ್ಯ ನಿರ್ವಹಿಸಿ 2018 ರಲ್ಲಿ ಪುತ್ತೂರು ವಿಭಾಗದ ಸುಳ್ಯ ಘಟಕಕ್ಕೆ ಸಂಚಾರ ನಿಯಂತ್ರಕರಾಗಿ ಭಡ್ತಿಗೊಂಡರು. ಒಟ್ಟಾಗಿ ಸುಮಾರು 33 ವರ್ಷಗಳ ಕಾಲ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಇವರ ಪತ್ನಿ ಶ್ರೀಮತಿ ಗೀತಾ ಗೃಹಿಣಿಯಾಗಿದ್ದು, ಪುತ್ರ ಪ್ರಥಿತ್ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಇನ್ನೋರ್ವ ಪುತ್ರ ಗಹನ್ ಎಂ.ಸಿ.ಎ ವ್ಯಾಸಂಗ ಮಾಡಿದ್ದಾರೆ.










