ರೈಟ್ ಟು ಲಿವ್ ಕೋಟೆ ಫೌಂಡೇಶನ್ ಬೆಂಗಳೂರು ವತಿಯಿಂದ ಕಳಂಜದ ಶಿಶು ಮಂದಿರದ ಪುಟಾಣಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ

0

ಹಿರಿಯ ಸಹಕಾರಿ ಧುರೀಣ, ರಾಜಕೀಯ, ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ, ಸಮಾಜ ಸೇವಕ ದಿ. ಕೋಟೆ ವಸಂತ ಕುಮಾರ್ ರವರ ನೆನಪಿಗಾಗಿ ಅವರ ಪುತ್ರ ಉದ್ಯಮಿ ರಘುರಾಮ ಕೋಟೆಯವರು ಸ್ಥಾಪಿಸಿರುವ ರೈಟ್ ಟು ಲಿವ್ ಕೋಟೆ ಫೌಂಡೇಶನ್ ವತಿಯಿಂದ ಕಳಂಜ ಶ್ರೀ ಭಾರತೀ ಶಿಶುಮಂದಿರದ ಪುಟಾಣಿಗಳಿಗೆ ಬ್ಯಾಗ್ ವಿತರಣೆ ನ. 28ರಂದು ನಡೆಯಿತು.

ರೈಟ್ ಟು ಲಿವ್ ಸಂಸ್ಥೆಯ ಪ್ರದೀಪ್ ಉಬರಡ್ಕ, ಶ್ರೀ ಭಾರತೀ ಸೇವಾ ಟ್ರಸ್ಟ್ ನ ಟ್ರಸ್ಟ್ ನ ಉಪಾಧ್ಯಕ್ಷ ಸತೀಶ್ ಚಂದ್ರ, ಕಾರ್ಯದರ್ಶಿ ಅಜಯ್ ಆದಳ, ಸಂಚಾಲಾಕಿ ಮಾಲಿನಿ ಪ್ರಸಾದ್, ಅರೋಗ್ಯ ಇಲಾಖೆಯ ಡಾ. ಭವ್ಯ ಮನೋಹರ್ ಹಾಗೂ ಸಿಬ್ಬಂದಿ ಗಳು, ಪೋಷಕರಾದ ಅಕ್ಷತಾ ಕಳಂಜ, ಪುಷ್ಪ ಕುಕ್ಕುತ್ತಡಿ, ಶಿಶು ಮಂದಿರದ ಮಾತಾಜಿ ಹಾಗೂ ಸಹಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.