‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ಮಾಸ್ ಲಿ. ನಿರ್ದೇಶಕ ಸತೀಶ್ ಕಾಶಿಪಟ್ಟರಿಗೆ ಮಾಸ್ ಅಧ್ಯಕ್ಷ ಸೀತಾರಾಮ ರೈಯವರಿಂದ‌ ಸನ್ಮಾನ

0

‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ಮಂಗಳೂರು ಮಾಸ್ ಲಿ.ನ ನಿರ್ದೇಶಕ ಸತೀಶ್ ಕಾಶಿಪಟ್ಟರಿಗೆ ಮಾಸ್ ಅಧ್ಯಕ್ಷ ಸೀತಾರಾಮ ರೈಯವರು ಮಾಸ್ ನ ಆಡಳಿತ ಮಂಡಳಿ ಸಭೆಯಲ್ಲಿ ಸನ್ಮಾನಿಸಿ ಗೌರವಿಸಿದರು. ಸಂಸ್ಥೆಯ ಸ್ಥಾಪಕ ಅಧ್ಯಕ್ಷ ರಾಜಾರಾಮ್ ಭಟ್, ಮಾಜಿ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ಎಮ್ ಭಟ್ ಸ್ವಾಗತಿಸಿ, ಮಾರಾಟ ಅಧಿಕಾರಿ ಲೋಕೇಶ್ ವಂದಿಸಿದರು.