ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ನ.29 ರಂದು ಕಾಲೇಜು ವಾರ್ಷಿಕೋತ್ಸವ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ವಹಿಸಿದ್ದ ಎಒಎಲ್ಇ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ವಹಿಸಿ, ದೀಪ ಬೆಳಗಿಸಿ, ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರಸಿದ್ಧ ಮಕ್ಕಳ ತಜ್ಞರು ಮತ್ತು ಲೇಖಕರಾದ ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಶುಭ ಹಾರೈಸಿದರು. ಗೌರವ ಅತಿಥಿಗಳಾಗಿ ಆಡಳಿತ ಮಂಡಳಿಯ ಕಾರ್ಯದರ್ಶಿ ಹೇಮನಾಥ್ ಕೆ.ವಿ, ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು, ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ. ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
















ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯರಾದ ಮಿಥಾಲಿ ಪಿ.ರೈ, ವಿದ್ಯಾರ್ಥಿ ಕ್ಷೇಮಾಧಿಕಾರಿ ಕು. ಬೇಬಿ ವಿದ್ಯಾ ಪಿ.ಬಿ., ವಿದ್ಯಾರ್ಥಿ ನಾಯಕ ಯಶವಂತ್ ಕುಶಾಲಪ್ಪ ಸಿ.ಜೆ., ವಿದ್ಯಾರ್ಥಿ ನಾಯಕಿ ಶ್ರೇಯಾ ಎಂ.ಜಿ., ಸಾಂಸ್ಕೃತಿಕ ಕಾರ್ಯದರ್ಶಿ ಸುಗುಣಾ ಎಸ್. ಮತ್ತು ಕ್ರೀಡಾ ಕಾರ್ಯದರ್ಶಿ ಕೌಶಿಕ್ ಜಿ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶರಣ್ಯ ಮತ್ತು ಬಳಗದವರು ಪ್ರಾರ್ಥಿಸಿದರು. ಪ್ರಾಚಾರ್ಯರಾದ ಮಿಥಾಲಿ ಪಿ ರೈ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ.ಬಿ ಸಾಧಕರ ಪರಿಚಯ ವಾಚಿಸಿದರು.

ಉಪನ್ಯಾಸಕರಾದ ಸಾವಿತ್ರಿ ಕೆ, ವಿನಯ್ ನಿಡ್ಯಮಲೆ, ಸುಚೇತಾ ಎಂ ದತ್ತಿನಿಧಿ, ಕಲಿಕೆ, ವಿವಿಧ ಸ್ಪರ್ಧೆಗಳ ವಿಜೇತರು, ಬೆಸ್ಟ್ ಔಟ್ ಗೋಯಿಂಗ್ ಅವಾರ್ಡ್ ಪಟ್ಟಿ ವಾಚಿಸಿದರು. ಶ್ರೇಯ ಎಂ.ಜಿ ಸ್ವಾಗತಿಸಿ, ಯಶವಂತ್ ಕುಶಾಲಪ್ಪ ಸಿ.ಜೆ ವಂದಿಸಿದರು. ವಿದ್ಯಾರ್ಥಿಗಳಾದ ಚೆನ್ನಕೇಶವ ಕೆ.ಸಿ, ಸಾಕ್ಷಿ ಎ, ಡೆನಿಕ ಲೋಬೊ, ಮೋಕ್ಷ ಬಿ.ಬಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಡಾ. ಕುಶ್ವoತ್ ಕೋಳಿಬೈಲು ಹಾಗೂ ವಿದ್ಯಾರ್ಥಿ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಹೇಮಂತ್ ಎಂ.ಕೆಯವರನ್ನು ಸನ್ಮಾನಿಸಲಾಯಿತು.










