ಕೊಡಿಯಾಲ : ಶ್ರೀ ಗೌರಿ ಸಂಜೀವಿನಿ ಒಕ್ಕೂಟದ ಮಹಾಸಭೆ

0

ಶ್ರೀ ಗೌರಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕೊಡಿಯಾಲ ಇದರ 24-25 ಸಾಲಿನ ಮಹಾಸಭೆಯು ಒಕ್ಕೂಟದ ಅಧ್ಯಕ್ಷರಾದ ಶೋಭಾ ಇವರ ಅಧ್ಯಕ್ಷತೆಯಲ್ಲಿ ಗ್ರಾಮಪಂಚಾಯತ್ ಗ್ರಂಥಾಲಯದಲ್ಲಿ ನಡೆಯಿತು. ಗ್ರಾಮಪಂಚಾಯತ್ ಅಧ್ಯಕ್ಷ ಹರ್ಷನ್ ದೀಪ ಬೆಳಗಿಸಿ ಶುಭ ಹಾರೈಸಿದರು.

ತಾಲೂಕು ಟಿಪಿಎಂ ಶ್ವೇತಾ ಎನ್. ಎಲ್. ಆರ್. ಎಂ ಯೋಜನೆಗಳ ಬಗ್ಗೆ ತಿಳಿಸಿದರು. ವಲಯ ಮೇಲ್ವಿಚಾರಕರಾದ ಮಹೇಶ್ ಪ್ರಾಸ್ತಾವಿಕ ಮಾತನಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಒಕ್ಕೂಟದ ಕೆಲಸ ಕಾರ್ಯಗಳ ಬಗ್ಗೆ ತಿಳಿಸಿದರು, ಬಿ.ಆರ್.ಪಿ .ಜಯಲಕ್ಷ್ಮಿ ಮಾದಕ ವ್ಯಸನ ದ ಬಗ್ಗೆ ನಿರ್ಮೂಲನೆ ಯ ಬಗ್ಗೆ ತಿಳಿಸಿ ಪ್ರತಿಜ್ಞೆ ಮಾಡಿಸಿದರು.ಕೃಷಿ ಮೇಲ್ವಿಚಾರಕರು ಹೃತಿಕ್, ಅಮೂಲ್ಯ ಸಾಕ್ಷಾರತ ಆರ್ಥಿಕ ಸಲಹೆಗಾರರಾದ ಸುಜಾತಾ ಕೃಷಿ ಸಖಿಗಳು ಭಾಗವಹಿಸಿದರು. ಪಶುಸಖಿ ಗೀತಾ ಸ್ವಾಗತಿಸಿ, ಎಂಬಿಕೆ ರಮ್ಯ ಒಕ್ಕೂಟದ ವರದಿ ಹಾಗೂ ವಾರ್ಷಿಕ ಮಂಡಿಸಿ. ಕಾರ್ಯಕ್ರಮವನ್ನು ನಿರೂಪಿಸಿದರು. ಒಕ್ಕೂಟದ ಪದಾಧಿಕಾರಿಗಳು ಸಂಘದ ಸದಸ್ಯರು ಒಕ್ಕೂಟದ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಭಾಗವಸಿದರು. ಮಹಾಸಭೆಯ ಅಂಗವಾಗಿ ಏರ್ಪಡಿಸಿದ್ದ ಆಟೋಟ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು.