Home ಪ್ರಚಲಿತ ಸುದ್ದಿ ಡಿ.05 ರಿಂದ ಡಿ.07 ರವರೆಗೆ ಮಾಡನ್ನೂರು ನೂರುಲ್ ಹುದಾ ಶಿಕ್ಷಣ ಸಂಸ್ಥೆ ದಶ ಸಂಭ್ರಮ

ಡಿ.05 ರಿಂದ ಡಿ.07 ರವರೆಗೆ ಮಾಡನ್ನೂರು ನೂರುಲ್ ಹುದಾ ಶಿಕ್ಷಣ ಸಂಸ್ಥೆ ದಶ ಸಂಭ್ರಮ

0

ಡಿ.07 ರಂದು ಪ್ರಥಮ ಸನದುದಾನ ಪದವಿ ಪ್ರಧಾನ ಮಹಾ ಸಮ್ಮೇಳನ

ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಶಿಕ್ಷಣ ಸಂಸ್ಥೆಯ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ ಸಮ್ಮೇಳನ ಡಿ.5ರಿಂದ 7ರ ತನಕ ಮಾಡನ್ನೂರು ಶಹೀದಿಯ್ಯಾ ನಗರದಲ್ಲಿ ಅದ್ದೂರಿಯಾಗಿ‌ ನಡೆಯಲಿದೆ ಎಂದು ಮಹಾ ಸಮ್ಮೇಳನ ಸ್ವಾಗತ ಸಮಿತಿಯ ಉಪಾಧ್ಯಕ್ಷ ಹಾಗೂ ಸ್ಮರಣ ಸಂಚಿಕೆ ಸಂಪಾದಕರಾದ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಕರ್ನಾಟಕದ ಸಮನ್ವಯ ಶಿಕ್ಷಣ ಕ್ಷೇತ್ರದಲ್ಲಿ ಕೇರಳದ ಚೆಮ್ಮಾಡ್ ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯ ಇದರ ಸಹ ಸಂಸ್ಥೆಯಾಗಿ 2015 ಆಗಸ್ಟ್ 19ರಂದು ಪುತ್ತೂರು ತಾಲೂಕಿನ ಮಾಡನ್ನೂರ್‌ನಲ್ಲಿ ನೂರುಲ್ ಹುದಾ ಶಿಕ್ಷಣ ಸಂಸ್ಥೆ ಆರಂಭಗೊಂಡಿತು.ಕಳೆದ ಹತ್ತು ವರ್ಷಗಳಲ್ಲಿ ತನ್ನ ಗುರಿಯೆಡೆಗೆ ಲಗ್ಗೆ ಇಟ್ಟ ಸಂಸ್ಥೆಯು 360 ವಿದ್ಯಾರ್ಥಿಗಳೊಂದಿಗೆ ವಿಶ್ವೋತ್ತರ ವಿದ್ಯಾಭ್ಯಾಸವನ್ನು ನೀಡುತ್ತಾ ಅರಬಿ, ಇಂಗ್ಲಿಷ್ ಉರ್ದು, ಕನ್ನಡ,ಮಲಯಾಳಂ ಹಾಗೂ ಇತರ ಭಾಷೆಗಳಲ್ಲಿ ಪಾಠ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಮುನ್ನಡೆಯುತಿದೆ. ಪ್ರಸ್ತುತ ಸಂಸ್ಥೆಗೆ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಎಕ್ಸಿಕ್ಯೂಟಿವ್ ಸಮಿತಿ, ಸುಳ್ಯ ಪುತ್ತೂರು ಹಾಗೂ 9 ವಲಯ ಸಮಿತಿಗಳು, ಯುಎಇ, ಕೆ ಎಸ್ ಎ ,ಕತ್ತರ್ ಮೊದಲಾದ ರಾಜ್ಯಗಳಲ್ಲಿ ರಾಷ್ಟ್ರೀಯ ಸಮಿತಿಗಳು ಅಸ್ತಿತ್ವದಲ್ಲಿದೆ. ಸಂಸ್ಥೆಯ ಹತ್ತನೇ ವಾರ್ಷಿಕ ಮಹಾಸಮ್ಮೇಳನವನ್ನು ಆಚರಿಸುವುದರೊಂದಿಗೆ 36 ವಿದ್ಯಾರ್ಥಿಗಳಿಗೆ ಹುದವಿ ಬಿರುದನ್ನು ನೀಡಲಿದ್ದೇವೆ.

ಡಿ. 05, 06, 07ರಂದು ನಡೆಯುವ ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು. ಡಿ.5ರಂದು ಶುಕ್ರವಾರ
ಮಖಾಂ ಝಿಯಾರತ್, ಧ್ವಜಾರೋಹಣ, ಸಮಸ್ತ-100, ಕಟ್ಟಡ ಉದ್ಘಾಟನೆ, ಮಜ್ಲಿಸುನ್ನೂರು, ಕೃತಿಗಳ ಬಿಡುಗಡೆ, ಸ್ಮರಣ ಸಂಚಿಕೆ ಪ್ರಕಾಶನ, ಉದ್ಘಾಟನಾ ಸಮ್ಮೇಳನ, ಮತಪ್ರವಚನ ನಡೆಯಲಿದೆ.ಅಂದು ಸಂಜೆ 4ಕ್ಕೆ ಸರಿಯಾಗಿ ಅಸ್ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಅವರ ನೇತೃತ್ವದಲ್ಲಿ ಸಮಸ್ತದ ನೂರು ಧ್ವಜಗಳನ್ನು ಹಾರಿಸಿ ಧ್ವಜಾರೋಹಣ ನೆರವೇರಲಿದೆ.

ಸಂಜೆ ನಡೆಯಲಿರುವ ಮಹಾ ಸಮ್ಮೇಳನದ ಉದ್ಘಾಟನ ಸಮಾರಂಭ ಪಾಣಕ್ಕಾಡ್ ಮುನವ್ವರ್ ಅಲಿ ಶಿಹಾಬ್ ತಂಙಳ್, ಕರ್ನಾಟಕ ರಾಜ್ಯ ಸಭಾಪತಿಗಳಾದ ಯು.ಟಿ.ಖಾದರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಸೈಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಮುಶಾವರ ಸದಸ್ಯರಾದ ಶೈಖುನಾ ಬಂಬ್ರಾಣ ಅಬ್ದುಲ್ ಖಾದರ್ ಅಲ್ ಖಾಸಿಮಿ, ಉಸ್ತಾದ್ ಉಸ್ಮಾನ್ ಫೈಝಿ ತೋಡಾರ್ ಇನ್ನಿತರ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ ಅಂತಾರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಕ್ ಹುದವಿ ಅಬುಧಾಬಿ ಮುಖ್ಯ ಪ್ರಭಾಷಣ ಗೈಯಲ್ಲಿದ್ದಾರೆ. 6ನೇ ತಾರೀಕು ಶನಿವಾರ ಫಿಖ್ಹ್ ಸೆಮಿನಾರ್, ಯುವಜನ ಸಮಾವೇಶ,ಗಲ್ಫ್ ಸಂಗಮ, ಧಫ್ ಸ್ಪರ್ಧಾ ಕಾರ್ಯಕ್ರಮ ಮತಪ್ರವಚನ ನಡೆಯಲಿದೆ.

ಬೆಳಿಗ್ಗೆ 9ರಿಂದ ಕರ್ಮ ಶಾಸ್ತ್ರ ಸಂಬಂಧವಾಗಿ ಸೆಮಿನಾರ್ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಗಲ್ಫ್ ಮೀಟ್ ಕಾರ್ಯಕ್ರಮ ನಡೆಯಲಿದೆ. ಶರೀಫ್ ಕಾವು ಅಧ್ಯಕ್ಷತೆ ವಹಿಸಲಿದ್ದಾರೆ. ಡಿ.7ರಂದು ಖತ್ಮುಲ್ ಕುರಾನ್, ವಿದ್ಯಾರ್ಥಿ ಸೆಮಿನಾರ್, ಶಿಲಾನ್ಯಾಸ, ಪದವಿ ವಸ್ತ್ರ ಪ್ರದಾನ, ಸನದುದಾನ, ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷರಾದ ಸೈಯ್ಯಿದುಲ್ ಉಲಮಾ ಸೈಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತಕೋಯ ತಂಙಳ್ ಪದವಿ ಪ್ರಧಾನ ಮಾಡಲಿದ್ದಾರೆ. ಪಾಣಕ್ಕಾಡ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಆಡಳಿತ ಮಂಡಳಿ ಉಪಾಧ್ಯಕ್ಷ ಕತ್ತರ್ ಇಬ್ರಾಹಿಂ ಹಾಜಿ, ಸಮ್ಮೇಳನ ಸ್ಮರಣ ಸಂಚಿಕೆ ಉಪಸಂಪಾದಕರಾದ ಕೆ.ಎಂ.ಮುಸ್ತಫ, ಸ್ವಾಗತ ಸಮಿತಿಯ ಸದಸ್ಯರಾದ ಇಕ್ಬಾಲ್ ಎಲಿಮಲೆ, ಸಿದ್ದಿಕ್ ಕೊಕ್ಕೊ, ಇಕ್ಬಾಲ್ ಸುಣ್ಣಮೂಲೆ ಉಪಸ್ಥಿತರಿದ್ದರು.

NO COMMENTS

error: Content is protected !!
Breaking