ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ನಲ್ಲಿ ಕೃತಿಕ್ ಎಸ್ ಪ್ರಥಮ

0

ಸುಳ್ಯ ಕೆವಿಜಿ ಜಾನಕಿ ವೆಂಕಟರಮಣ ಸಭಾಂಗಣದಲ್ಲಿ ನ.22 ಮತ್ತು ನ.23 ರಂದು ನಡೆದ ರಾಷ್ಟ್ರಮಟ್ಟದ ಕರಾಟೆಯಲ್ಲಿ ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಕೆವಿಜಿ ಐಪಿಎಸ್‌ನ 7ನೇ ತರಗತಿ ವಿದ್ಯಾರ್ಥಿ ಕೃತಿಕ್ ಎಸ್ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಸುಳ್ಯ ಜಯನಗರ ನಿವಾಸಿ ಸುಭಾಷ್ಚಂದ್ರ ಮತ್ತು ರೇಖಾ ದಂಪತಿಗಳ ಪುತ್ರ. ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಅವರ ವಿದ್ಯಾರ್ಥಿ.