
ರಾಜ್ಯ ಪ್ರಶಸ್ತಿ ಪುರಸ್ಕೃತ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಸೇವಾ ಪಥಗಳ ಪರಿಚಯ ಹಾಗೂ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರ ಮನೆಯವರ ಒಟ್ಟು ಸೇರುವಿಕೆಯಲ್ಲಿ ಅಪೂರ್ವ ಕಾರ್ಯಕ್ರಮವು ನ.29 ರಂದು ಪಂಜ ಲಯನ್ಸ್ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಹಿತೇಶ್ ಪಂಜದಬೈಲು ದೀಪ ಬೆಳಗಿಸಿ ಉದ್ಘಾಟಿಸಿದರು.. ವಿಶೇಷವಾಗಿ ಜೋಡಿ ತಾರೆ ಪ್ರಶಸ್ತಿ ಪುರಸ್ಕೃತ ಪೂರ್ಣಿಮ ಕೃಷ್ಣರಾಜ್ ರವರಿಂದ ಮನೋರಂಜನೆ ಕಾರ್ಯಕ್ರಮ ನಡೆಯಿತು.
















ಪಂಜ ಗ್ರಾಮ ಪಂಚಾಯತ್ ನ ತ್ಯಾಜ್ಯ ವಿಲೇವಾರಿ ಘಟಕದ ಸ್ವಚ್ಛತಾ ಸಿಬ್ಬಂದಿಯಾಗಿ ಸೇವ ಸಲ್ಲಿಸುತ್ತಿರುವ ಶ್ರೀಮತಿ ಕೋಮಲಾಂಗಿ, ಶ್ರೀಮತಿ ದೇವಕಿ, ಶ್ರೀಮತಿ ವಿಶಾಲಾಕ್ಷಿ ಎಂ, ಶ್ರೀಮತಿ ಕಮಲ ಹಾಗೂ ಪಂಜ ಗ್ರಾಮ ಪಂಚಾಯತ್ ನ ಮುಕ್ತಿಧಾಮದಲ್ಲಿ ಶವ ಸಂಸ್ಕಾರ ಮಾಡುವ ಕಾರ್ಯ ಹಾಗೂ ಸ್ವಚ್ಛತಾ ಕಾರ್ಯ ಮಾಡುತ್ತಿರುವ ತಾರಾನಾಥ ಬರೆಮೇಲು ರವರನ್ನು ಸನ್ಮಾನಿಸಲಾಯಿತು . ಪಂಚಶ್ರೀ ಜೀವರಕ್ಷಕ ಅಂಬ್ಯುಲೆನ್ಸ್ ನ ಚಾಲಕರಾಗಿ ಅನೇಕ ಜೀವಗಳನ್ನು ಉಳಿಸಿದ ಪದ್ಮಕುಮಾರ್ ನಾಯರ್ ಕೆರೆ, ದಯಾನಂದ ಬೇರ್ಯ, ಶಶಿ ದಾಸ್ ನಾಗತೀರ್ಥ, ಉದಯಶಂಕರ ಪಲ್ಲೋಡಿ ರವರನ್ನು ಕ್ಲಬ್ ನ ಗೌರವ ಸಲಹೆಗಾರರಾದ ಶಿವರಾಮ್ ಏನೆಕಲ್ಲು, ಯೋಗೀಶ್ ಚಿದ್ಗಲ್, ದಿಲೀಪ್ ಕುಮಾರ್ ಬಾಬ್ಲುಬೆಟ್ಟು, ಉಮೇಶ್ ಪಂಜದಬೈಲು, ದಾಮೋದರ ನೇರಳ ರವರು ಸನ್ಮಾನಿಸಿದರು. ಕ್ಲಬ್ ನ ಹಿತೈಷಿಗಳಾದ ಸೋಮಶೇಖರ ನೇರಳ ಇವರು ಕ್ಲಬ್ ಸಾಧನೆ ಅತ್ಯುತ್ತಮ ಕಾರ್ಯಗಳ ಬಗ್ಗೆ ಅಭಿನಂದಿಸಿದರು. ಕ್ಲಬ್ ನ ಗೌರವಾಧ್ಯಕ್ಷ ಪವನ ಪಲ್ಲತ್ತಡ್ಕ ರವರು ಪಂಚಶ್ರೀ ಪರಿವಾರ ಸಂಗಮ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು , ಕ್ಲಬ್ ನ ಎಲ್ಲಾ ಸದಸ್ಯರ ಮನೆಯವರು ಒಟ್ಟು ಸೇರುವಿಕೆ ಇದೇ ಮೊದಲ ಬಾರಿ ಎಂದು ತಿಳಿಸಿದರು ಹಾಗೂ ತಮಗೆ ದೊರಕಿದ ಅವಕಾಶಗಳು ಪ್ರಶಂಸನೆ ಎಲ್ಲವೂ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನಿಂದ ಎಂದು ತಮ್ಮ ಮಾತನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷ ಹಿತೇಶ್ ಪಂಜದಬೈಲು , ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕ ಜನಾರ್ಧನ ನಾಗತೀರ್ಥ ಹಾಗೂ ಆದರ್ಶ ಚಿದ್ಗಲ್, ಕ್ಲಬ್ ನ ಕಾರ್ಯದರ್ಶಿ ಶಶಿದಾಸ್ ನಾಗತೀರ್ಥ, ಖಜಾಂಜಿ ನವೀನ್ ನಾಗತೀರ್ಥ ಹಾಗೂ ಕ್ಲಬ್ ನ ಎಲ್ಲಾ ಸದಸ್ಯರು ಮತ್ತು ಮನೆಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚೇತನ್ ಜಳಕದಹೊಳೆ ಸ್ವಾಗತಿಸಿದರು, ಶಶಿದಾಸ್ ವಂದಿಸಿದರು.











