ಕಳ್ಳರು ಕದ್ದೊಯ್ದಿರುವ ಶಂಕೆ















ಜಾಲ್ಸೂರು ಗ್ರಾಮದ ಕದಿಕಡ್ಕ ಅಶೋಕರವರ ಸ್ಕೂಟರ್ ಕೆ.ಎಲ್. 14 ಟಿ 5844 ನಂಬ್ರದ ಯಮಹಾ ಸ್ಕೂಟರ್ ಕಾಣೆಯಾಗಿದೆ.
ನ.29ರಂದು ರಾತ್ರಿ ಅಶೋಕರವರು ಅರಿಯಡ್ಕದ ಮನೆಯೊಂದರಲ್ಲಿ ಮದುರಂಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಸ್ಕೂಟರನ್ನು ರಸ್ತೆ ಬದಿ ನಿಲ್ಲಿಸಿದ್ದರು. ಕಾರ್ಯಕ್ರಮ ಮುಗಿಸಿ ಹಿಂತಿರುಗಿ ಬಂದಾಗ ಸ್ಕೂಟರ್ ನಾಪತ್ತೆಯಾಗಿತ್ತು. ಹುಡುಕಾಡಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸ್ಕೂಟಿಯನ್ನು ಕಳ್ಳರು ಕದ್ದೊಯ್ದಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸ್ ಕೇಸು ದಾಖಲಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.










